ಡಿಸೆಂಬರ್ ಅಥವಾ ಜನವರಿಯಲ್ಲಿ ಚಿತ್ರ ಬಿಡುಗಡೆಗೆ ನಿರ್ಧರಿಸಿದ ‘ಪೊಗರು’ ಚಿತ್ರ ತಂಡ ಬೆಂಗಳೂರು, ನವೆಂಬರ್ 26, 2020 (..):ಡಿಸೆಂಬರ್ 25 ಅಥವಾ ಜನವರಿ 1 ರಂದು ಧ್ರುವ ಸರ್ಜಾ ನಟಿಸಿರುವ ಬಹುನಿರೀಕ್ಷೆಯ ಚಿತ್ರ ‘ಪೊಗರು’ ಸಿನಿಮಾ ಬಿಡುಗಡೆಯಾಗಲಿದೆ. ಮತ್ತಷ್ಟು ದಿನ ಕಾದರೆ ಆರ್ಥಿಕ ನಷ್ಟ ಉಂಟಾಗಲಿರುವ ಹಿನ್ನೆಲೆಯಲ್ಲಿ ‘ಪೊಗರು’ ಚಿತ್ರತಂಡ ಸಿನಿಮಾ ಬಿಡುಗಡೆಗೆ ಎರಡು ದಿನಾಂಕ ನಿಗದಿಪಡಿಸಿಕೊಂಡಿದೆ. ಕೊರೋನಾ ಮಾರ್ಗಸೂಚಿಗಳಲ್ಲಿ ಬದಲಾವಣೆಯಾದಲ್ಲಿ ಜನವರಿ 1 ರಂದು, ಬದಲಾವಣೆಯಾಗದಿದ್ದರೆ ಡಿಸೆಂಬರ್ 25 ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸದ್ಯಕ್ಕಂತೂ ಶೇಕಡ 50 ರಷ್ಟು ಪ್ರೇಕ್ಷಕರು ಮಾತ್ರ ಚಿತ್ರಮಂದಿರಕ್ಕೆ ಬರಬೇಕು. ಅಂತರ ಕಾಯ್ದುಕೊಳ್ಳಬೇಕಿದೆ. ಇವೆಲ್ಲ ಕಾರಣಗಳಿಂದ ಸಿನಿಮಾ ಮಂದಿರಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ.