ರಮೇಶ್ ಜಾರಕಿಹೊಳಿ ಪರ್ಯಾಯ ನಾಯಕರಲ್ಲ- ಸಚಿವ ಭೈರತಿ ಬಸವರಾಜು… ದಾವಣಗೆರೆ,ನವೆಂಬರ್,25,2020(..):ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನ ಸಚಿವಾಕಾಂಕ್ಷಿಗಳು ಭೇಟಿ ಮಾಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಭೈರತಿ ಬಸವರಾಜ್, ರಮೇಶ್ ಜಾರಕಿಹೊಳಿ ಪರ್ಯಾಯ ನಾಯಕರಲ್ಲ ಎಂದಿದ್ದಾರೆ. ದಾವಣಗೆರೆಯಲ್ಲಿ ಇಂದು ಮಾತನಾಡಿದ ಸಚಿವ ಭೈರತಿ ಬಸವರಾಜು, ಅನುದಾನ ಪಡೆಯಲು ನನ್ನನ್ನು ಸಹ ಭೇಟಿಯಾಗುತ್ತಾರೆ. ಅದೇ ರೀತಿ ರಮೇಶ್ ಜಾರಕಿಹೊಳಿ ಅವರನ್ನ ಭೇಟಿಯಾಗ್ತಾರೆ.. ಹೀಗಾಗಿ ರಮೇಶ್ ಜಾರಕಿಹೊಳಿ ಪರ್ಯಾಯ ನಾಯಕರಲ್ಲ ಎಂದರು. ಸಚಿವ ಸಂಪುಟ ವಿಸ್ತರಣೆ ವಿಚಾರ, ಅದು ಸಿಎಂ ಪರಮಾಧಿಕಾರ. ಸಿಎಂ ಬಿಎಸ್ ವೈ ನಿರ್ಧಾರಕ್ಕೆ ನಾವು ಬದ್ಧ. ಸಿಎಂ ಬಿಎಸ್ ವೈ ಹೈಕಮಾಂಡ್ ಸೂಚನೆಯಂತೆ ನಡೆಯುತ್ತಾರೆ ಎಂದರು. : - – - - .