ವಾಹನ ನಿಲುಗಡೆ ಜಾಗದಲ್ಲಿ ಇಂಟರ್ ಲಾಕ್ ಕಾಮಗಾರಿ: ಸ್ಥಳೀಯರಿಂದ ಪ್ರತಿಭಟನೆ… ಮೈಸೂರು,ನವೆಂಬರ್,24,2020(..):ನಗರದ ಶಿವರಾಂಪೇಟೆಯ ವಿನೋಬಾ ರಸ್ತೆ ಬಳಿ ನಡೆಸಲಾಗುತ್ತಿರುವ ಇಂಟರ್ ಲಾಕ್ ಕಾಮಗಾರಿಯನ್ನ ವಿರೋಧಿಸಿ ಸ್ಥಳೀಯರು ಇಂದು ಪ್ರತಿಭಟನೆ ನಡೆಸಿದರು. ಸಾಂಸ್ಕೃತಿಕ ನಗರಿಯ ಹೃದಯ ಭಾಗದ ವಿನೋಬ ರಸ್ತೆಯಲ್ಲಿ ವಾಹನ ನಿಲುಗಡೆ ಜಾಗದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ‌ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಶಾಸಕರ ಅನುದಾನದಡಿ 50 ಲಕ್ಷ ರೂ. ವೆಚ್ಚದಲ್ಲಿ ಇಂಟರ್ ಲಾಕ್ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಪಾದಚಾರಿ ಗಳ ತಿರುಗಾಟಕ್ಕೆ ಜಾಗ ಬಿಡಲಾಗುತ್ತಿಲ್ಲ. ಹೀಗಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಮಾಡುವ ಕಾಮಗಾರಿ ನಿಲ್ಲಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. : - – –- – -