ನಟಿ ಹರ್ಷಿಕಾ ಪೂಣಚ್ಚ ಟ್ವಿಟ್ಟರ್ ಖಾತೆ ಹ್ಯಾಕ್ ಬೆಂಗಳೂರು, ನವೆಂಬರ್ 24, 2020 (..):ನಟಿ ಹರ್ಷಿಕಾ ಪೂಣಚ್ಚ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ಇತ್ತೀಚಿಗೆ ಟ್ವಿಟ್ಟರ್ ಖಾತೆ ಡಿಪಿಯಲ್ಲಿ ಯಾರೊ ವಿದೇಶಿಗನ ಫೊಟೊ ಹಾಕಲಾಗಿದೆ, ಜತೆ ಆತ ತನ್ನ ಕೆಲವು ವಿಡಿಯೋಗಳನ್ನು ಹರ್ಷಿಕಾ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾನೆ. ನವೆಂಬರ್ 23 ರಂದೇ ಹರ್ಷಿಕಾ ಪೂಣಚ್ಚ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ವ್ಯಕ್ತಿಯೊಬ್ಬ ತಾನು ನಾಯಿಯೊಂದಿಗೆ ಆಡುತ್ತಿರುವ, ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋಗಳನ್ನು ಹರ್ಷಿಕಾ ಪೂಣಚ್ಚ ಖಾತೆಯಲ್ಲಿ ಪ್ರಕಟಿಸಿದ್ದಾನೆ. ಹರ್ಷಿಕಾ ಪೂಣಚ್ಚ ಪ್ರಸ್ತುತ ಲಂಡನ್‌ನಲ್ಲಿದ್ದಾರೆ. ತಮ್ಮ ಮೊದಲ ಭೋಜ್‌ಪುರಿ ಸಿನಿಮಾದ ಚಿತ್ರೀಕರಣದಲ್ಲಿ ಅವರು ಬ್ಯುಸಿಯಾಗಿದ್ದಾರೆ.