ಸಿಎಂ ಬಿಎಸ್ ವೈ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕೆ… ಕಲಬುರಗಿ,ನವೆಂಬರ್,24,2020(..)ಮರಾಠ ಅಭಿವೃದ್ಧಿ ನಿಗಮ ಮತ್ತು ವಿರಶೈವ ಲಿಂಗಾಯಿತ ಅಭಿವೃದ್ದಿ ನಿಗಮ ರಚಿಸಿ ಅನುದಾನ ಬಿಡುಗಡೆ ಮಾಡಿರುವ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಬಿಎಸ್ ವೈ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಕೊಂಡಿರಲಿಲ್ಲ. ಸಮಾಜವನ್ನ ಭಾಗ ಮಾಡುತ್ತಿದ್ದಾರೆ. ಜಾತಿ ಭಾಷೆ ಮೇಲೆ ರಾಜಕೀಯ ಮಾಡೋದು ಸರಿಯಲ್ಲ. ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಕಲ್ಬರ್ಗಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ನಾಳೆ ಸಿಬಿಐ ವಿಚಾರಣೆಗೆ ಹಾಜರಾಗುತ್ತೇನೆ.ನನ್ನ ಮಗಳ ಎಂಗೆಜ್ಮೆಂಟ್ ಇದ್ದಾಗ ಮನೆಗೆ ಬಂದು ನೋಟಿಸ್ ಕೊಡ್ತಾರೆ, ಬಿಜೆಪಿಗೆ ದ್ವೇಷದ ರಾಜಕಾರಣ ಉಕ್ಕಿ ಹರಿಯುತ್ತಿದೆ. ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ. ಕಾನೂನಿನ ಚೌಕಟ್ಟಿನಲ್ಲೇ ಉತ್ತರ ನೀಡುತ್ತೇನೆ ಎಂದರು. ನಮ್ಮ ಅಭಿಮಾನಿಗಳು ಯಾರು ಸಿಬಿಐ ಆಫೀಸ್​ಗೆ ಬರಬಾರದು. ಯಾರು ಕೂಡ ನನ್ನ ಬಗ್ಗೆ ಯಾವುದೇ ಹೇಳಿಕೆ ಕೊಡಬಾರದು. ಯಾವ ಶಾಸಕರ ಮೇಲು ಸಿಬಿಐ ತನಿಖೆಗೆ ಕೊಟ್ಟಿಲ್ಲ, ನನಗೆ ಮಾತ್ರ ನೋಟೀಸ್ ನೀಡಲಾಗಿದೆ. ನನ್ನ ಮೇಲೆ ಎಫ್​ಐಆರ್​ ಹಾಕಿದ್ದೆ ರಾಜಕೀಯ ಪ್ರೇರಿತ. ಕೇಂದ್ರ ಮತ್ತು ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಡಿಕೆಶಿ ಆರೋಪಿಸಿದರು. …. ’ – .. , . 24, 2020 (..): .. - . . “ - . ,” . .: .. -- : - – - - - …