ಮೈಸೂರು ವಿವಿ : ಹಣ ದುರುಪಯೋಗ, ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಚಾರಣಾ ಸಮಿತಿ ನೇಮಕ. ಮೈಸೂರು, ಏ.19, 2024 : (.. ) ಮೈಸೂರು ವಿಶ್ವವಿದ್ಯಾನಿಲಯದಲ್ಲಿನ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಮೂರ್ತಿ ನೇತೃತ್ವದಲ್ಲಿ ವಿಚಾರಣೆಗೆ ಸಮಿತಿ ರಚನೆ. ಕುಲಾಧಿಪತಿಗಳು ಆದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಂದ ಆದೇಶ. ರಾಜ್ಯ ಲೆಕ್ಕಪತ್ರ ಇಲಾಖೆ ಮತ್ತು ಹಣಕಾಸು ಇಲಾಖೆ ಆಡಿಟ್ ವರದಿ ಪ್ರಕಾರ, 55 ಕೋಟಿ ರೂ. ದುರುಪಯೋಗ ಆಗಿದೆ. ಈ ಹಗರಣದ ಕುರಿತು ರಾಜ್ಯ ಲೆಕ್ಕಪತ್ರ ಇಲಾಖೆಯ ಅವಲೋಕನಗಳ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಗೆ ತಿಳಿಸಲಾಗಿದೆ. ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯ ವರದಿ, ಹಣಕಾಸು ಇಲಾಖೆ ಪತ್ರ ಮತ್ತು ಉನ್ನತ ಶಿಕ್ಷಣ ಇಲಾಖೆ ಸಲ್ಲಿಸಿರುವ ಆಪಾದಿತ ಅಕ್ರಮಗಳ ವಿವರಗಳ ಆಧಾರದ ಮೇಲೆ ಈ ಕ್ರಮಕ್ಕೆ ರಾಜ್ಯಪಾಲರು ಮುಂದಾಗಿದ್ದಾರೆ. ಹಣ ದುರುಪಯೋಗ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸಲ್ಲಿಸಿದ ವ್ಯಕ್ತಿಗಳ ಪಟ್ಟಿಯು ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತರಾಗಿರುವ ಮತ್ತು ಇತರ ವಿಶ್ವವಿದ್ಯಾನಿಲಯಗಳಲ್ಲಿ ಅಧಿಕಾರಿಗಳಾಗಿ ನೇಮಕಗೊಂಡ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡಿದೆ. ಜತೆಗೆ ಈ ಹಿಂದೆ ವಿಶ್ವವಿದ್ಯಾಲಯದಲ್ಲಿ ಉದ್ಯೋಗದಲ್ಲಿದ್ದ ಖಾಸಗಿ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ. ಅಧಿಕಾರಿಗಳ ಪಟ್ಟಿ ಕೆಳಕಂಡಂತಿದೆ. ಪ್ರೊ.ಮಾನೆ ಡಿ.ಎ, ಪ್ರೊ.ಸಿ.ಬಸವರಾಜು, ಡಾ.ನಿಂಗಮ್ಮ ಬೆಸ್ತೂರು. ಪ್ರೊ.ಟಿ.ಕೆ.ಉಮೇಶ್‌, ಪ್ರೊ.ಆಯಿಷಾ ಶರೀಫ್‌ ಹಾಗೂ ಪ್ರೊ. ಜಿ.ಹೇಮಂತ್‌ ಕುಮಾರ್ (ಕುಲಪತಿಗಳು). ಪ್ರೊ.ಆರ್.ರಾಜಣ್ಣ, ಡಿ ಭಾರತಿ (ಕೆಎಎಸ್)‌, ಪ್ರೊ.ಲಿಂಗರಾಜ್‌ ಗಾಂಧಿ, ಪ್ರೊ.ಆರ್.ಶಿವಪ್ಪ (ಕುಲಸಚಿವರು) ಪ್ರೊ.ಬಿ.ಮಹಾದೇವಪ್ಪ, ಪ್ರೊ.ಟಿ.ದೇವರಾಜು (ಹಣಕಾಸು ಅಧಿಕಾರಿ ) ಚೇತನ್‌ (ಕುಲಪತಿಗಳ ವಿಶೇಷಾಧಿಕಾರಿ) ವಿಚಾರಣ ಸಮಿತಿ : ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಧೀಶರಾದ ಬಸವರಾಜ್‌ ಶಿವಪ್ಪ ತಡಹಾಳ್‌ ನೇತೃತ್ವದ ಈ ವಿಚಾರಣಾ ಸಮಿತಿ ಸದಸ್ಯರಾಗಿ ರಾಜ್ಯ ಹಣಕಾಸು ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಕ್ಯಾ. ಟಿ.ವೇಣುಗೋಪಾಲ್‌ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಈ ಸಮಿತಿ ಹಣಕಾಸು ಇಲಾಖೆ ಹಾಗೂ ಲೆಕ್ಕಪತ್ರ ಇಲಾಖೆ ನೀಡಿರುವ ಆಡಿಟ್‌ ವರದಿ ಅನ್ವಯ, ಹಣ ದುರುಪಯೋಗ ಸಂಬಂಧದ ಸಂಪೂರ್ಣ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಬೇಕು. ಈ ವಿಚಾರಣೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. : , , : . , . , , 28-11-2022 . 55 . ( 1), ( 2) ( 3) . , . :