ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಧಾರವಾಡ,ನವೆಂಬರ್,23,2020(..):ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನ ಮತ್ತೆ 14 ದಿನಗಳವರೆಗೆ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನವನ್ನ 14 ದಿನಗಳವರೆಗೆ ವಿಸ್ತರಿಸಿ ಧಾರವಾಡ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶಿಸಿದೆ. ಇದೀಗ ಮತ್ತೆ ಡಿಸೆಂಬರ್ 7ರವರೆಗೆ ವಿನಯ್ ಕುಲಕರ್ಣಿ ಜೈಲುವಾಸ ಅನುಭವಿಸಬೇಕಾಗಿದೆ. ಸದ್ಯ ವಿನಯ್ ಕುಲಕರ್ಣಿ ಹಿಂಡಿಲಗಾ ಜೈಲಿನಲ್ಲಿದ್ದಾರೆ. : - - -14 -