ಸೈಬರ್ ಸುರಕ್ಷತೆಗೆ ‘ಸೈಸೆಕ್’’ ಬೆಂಗಳೂರು,ನವೆಂಬರ್,21,2020(..):ಬೆಂಗಳೂರಿನಲ್ಲಿ ನಡೆಯುತ್ತಿರುವ ವರ್ಚ್ಯುಯಲ್ ರೂಪದ 3 ದಿನಗಳ ‘ತಂತ್ರಜ್ಞಾನ ಶೃಂಗಸಭೆ-2020’ ರಲ್ಲಿ ವೈವಿಧ್ಯಮಯ ಮಳಿಗೆಗಳಿದ್ದು, ರಾಜ್ಯ ಸರ್ಕಾರದ ಸೈಬರ್ ಭದ್ರತೆ ಕುರಿತ ಕಾರ್ಯಕ್ರಮಗಳ ಕುರಿತು ‘ಸೈಸೆಕ್’ ಮಳಿಗೆಯಲ್ಲಿ ವಿಸ್ತೃತ ಮಾಹಿತಿ ಲಭ್ಯವಿದೆ. ಪ್ರಸಕ್ತ ಕಂಪ್ಯೂಟರ್ ಮತ್ತು ಡಿಜಿಟಲ್ ಯುಗದಲ್ಲಿ ದತ್ತಾಂಶ ಸುರಕ್ಷತೆ ಹಾಗೂ ಸೈಬರ್ ಸುರಕ್ಷತೆ ಅತ್ಯಂತ ಪ್ರಮುಖ ಅಂಶವಾಗಿದ್ದು, ಸದ್ಯದ ಭವಿಷ್ಯದಲ್ಲೂ ಈ ವಲಯ ವೈವಿಧ್ಯಮಯ ಅವಕಾಶಗಳನ್ನು ತೆರೆದಿಟ್ಟಿದೆ. ಈ ನಿಟ್ಟಿನಲ್ಲಿ ಸೈಬರ್ ಸುರಕ್ಷತೆ ಕುರಿತು ಲಭ್ಯವಿರುವ ಉತೃಷ್ಟ ಶಿಕ್ಷಣ ಮತ್ತು ವ್ಯಾಸಂಗ ಕಾರ್ಯಕ್ರಮಗಳ ಬಗ್ಗೆ ಮಳಿಗೆಯಲ್ಲಿ ವಿವರವಾದ ಮಾಹಿತಿ ಲಭ್ಯವಿದೆ. ಸೈಬರ್ ಸುರಕ್ಷತೆ ವಲಯದಲ್ಲಿ ನವೋದ್ಯಮವನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ‘ಹ್ಯಾಕ್ ಕಾರ್ಯಕ್ರಮ ಜಾರಿಗೊಳಿಸಿದೆ. ಇದರ ಅಡಿಯಲ್ಲಿ ನವೋದ್ಯಮಗಳಿಗೆ ಪೂರಕ ವಾತಾವರಣ ನಿರ್ಮಾಣ, ಜಾಗತಿಕ ಮಟ್ಟದ ತರಬೇತಿ-ಮಾರ್ಗದರ್ಶನ, ಮೂಲಸೌಕರ್ಯ, ನಾವಿನ್ಯತಾ ಇನ್ ಕುಬೇಷನ್ ವೇದಿಕೆ ಒದಗಿಸುವುದು… ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುತ್ತಿದೆ. ಈ ಎಲ್ಲದರ ಬಗ್ಗೆ ಮಳಿಗೆಯಲ್ಲಿ ವಿವರ ಲಭ್ಯವಿದ್ದು, ಆಸಕ್ತರು ವರ್ಚುವಲ್ ರೂಪದಲ್ಲಿ ಭೇಟಿ ನೀಡಬಹುದು. ಸಂದೇಹಗಳನ್ನು ಬಗೆಹರಿಸಿಕೊಳ್ಳಲು ವಾಟ್ಸ್ ಅಪ್ ಮೂಲಕ ಸಂವಾದ ನಡೆಸುವ ಅವಕಾಶವನ್ನೂ ನೀಡಲಾಗಿದೆ. : – - -2020