ಬೆಂಗಳೂರು ಟೆಕ್ ಸಮ್ಮಿಟ್-2020: ವರ್ಚ್ಯುಯಲ್ ಮೇಳಕ್ಕೆ ನಿರೀಕ್ಷೆ ಮೀರಿ ಸ್ಪಂದನೆ…. ಬೆಂಗಳೂರು,ನವೆಂಬರ್,20,2020(..):ಇದೇ ಮೊದಲ ಸಲ ವರ್ಚ್ಯುಯಲ್ ಆಗಿ ನಡೆದ ‘ಬೆಂಗಳೂರು ತಂತ್ರಜ್ಞಾನ ಮೇಳ-2020’ ಕ್ಕೆ ಮೊದಲ ದಿನವಾದ ಗುರುವಾರ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಬಿಟಿಎಸ್-2020 ಆನ್ ಲೈನ್ ವೇದಿಕೆಯೊಂದರಲ್ಲೇ 7000 ವ್ಯಾಪಾರೋದ್ಯಮಿಗಳು ನೋಂದಣಿ ಮಾಡಿ ಪಾಲ್ಗೊಂಡರು. ಇದಲ್ಲದೇ ಇತರ 10,000 ಜನರು ಇದೇ ವೇದಿಕೆ ಮೂಲಕ ಆಸಕ್ತಿಯಿಂದ ಭಾಗವಹಿಸಿದರು. ಒಟ್ಟಾರೆ ಈ ವೇದಿಕೆ ಮೂಲಕ ಪಾಲ್ಗೊಂಡವರ ಸಂಖ್ಯೆ 17,000 ದಾಟಿದೆ. ಕಳೆದ ವರ್ಷ ಮೂರು ದಿನಗಳೂ ಸೇರಿ ಪಾಲ್ಗೊಂಡ ವ್ಯಾಪಾರೋದ್ಯಮಿಗಳ ಸಂಖ್ಯೆ 3,000 ಇತ್ತು. ಇದಲ್ಲದೇ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಕೂಡ 2 ಕೋಟಿಗೂ ಹೆಚ್ಚು ಜನರನ್ನು ಇದು ತಲುಪಿದೆ, ಟಿ.ವಿ. ವಾಹಿನಿಗಳ ಮೂಲಕ ವೀಕ್ಷಿಸಿದವರ ಸಂಖ್ಯೆಯೂ ದೊಡ್ಡದಿದೆ. ಹೀಗಾಗಿ ಒಟ್ಟಾರೆ ದೇಶ-ವಿದೇಶಗಳ ಕೋಟ್ಯಂತರ ಜನರು ಅತ್ಯಧಿಕ ಸಂಖ್ಯೆಯಲ್ಲಿ ಇದರಲ್ಲಿ ಭಾಗಿಯಾಗಿದ್ದಾರೆ. …. -2020: , . 20, 2020 (..): ‘ -2020 . 7000 -2020 . , 10,000 . , 17,000, 3,000. 2 .: 2020/ : -2020- – -