ಪ್ರೀತಿಸಿ ಮದುವೆಯಾದ ವಿಶೇಷ ಜೋಡಿ : ‘’ಕೆಫೆಯೊಂದರ ಪ್ರೇಮಕಥೆ’’…! ಬೆಂಗಳೂರು,ನವೆಂಬರ್,19,2020(..): ಪ್ರೀತಿಗೆ ಹಣ, ಅಂತಸ್ಥು, ಸೌಂದರ್ಯ, ಜಾತಿ,ಧರ್ಮ ಇದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಪ್ರೀತಿಸುವ ಎರಡು ಹೃದಯಗಳ ಒಪ್ಪಿಗೆಯಷ್ಟೇ ಅಂತಿಮ ಎಂಬುದಕ್ಕೆ ಹೀಗೊಂದು ವಿಶೇಷ ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ.ಉದ್ಯಾನ ನಗರಿಯ ಕೋರಮಂಗಲದ ಸೋಮೇಶ್ವರ ದೇವಸ್ಥಾನದಲ್ಲಿ ಇಬ್ಬರು ಕುಬ್ಜರು ತಮ್ಮ ಸ್ನೇಹಿತರ ಹಾಗೂ ಕುಟುಂಬಸ್ಥರ ಸಮಕ್ಷಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ಕೆಫೆಯೊಂದರಲ್ಲಿ ಪ್ರೀತಿ ಆರಂಭ ಬೈರಪ್ಪ ಹಾಗೂ ರೂಪಾ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ. ಮೂಲತಃ ಕೊಪ್ಪಳ ಮೂಲದ ಬೈರಪ್ಪ ಹಾಗೂ ಬೆಳಗಾವಿ ಮೂಲದ ರೂಪಾ ಖಾಸಗಿ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡ ಬೈರಪ್ಪ ಹಾಗೂ ರೂಪಾ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಲವ್ ಕಂ ವೆಡ್ಡಿಂಗ್ ಸ್ಟೋರಿಗೆ ಸಾಕ್ಷಿಯಾದ ಕೆಫೆ ಮಾಲೀಕರೆ ಖುದ್ದು ನಿಂತು ಮದುವೆ ನೆರವೇರಿಸಿದ್ದಾರೆ ಎಂದು ತಿಳಿದು ಬಂದಿದೆ. ; ------