ಬೆಳ್ಳಂಬೆಳಿಗ್ಗೆ ಮನೆ ಮೇಲೆ ಕಾಡಾನೆ ದಾಳಿಗೆ ವೃದ್ದ ಸಾವು: ಪತ್ನಿಗೆ ಗಂಭೀರ ಗಾಯ… ಮೈಸೂರು,ನವೆಂಬರ್,19,2020(..):ಬೆಳ್ಳಂಬೆಳಿಗ್ಗೆ ಮನೆ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಕಾಡಾನೆ ದಾಳಿಯಿಂದ ವೃದ್ದ ಸಾವನ್ನಪ್ಪಿ ವೃದ್ದನ ಪತ್ನಿಗೆ ಗಂಭೀರ ಗಾಯಗೊಂಡಿರುವ ಘಟನೆ ಹೆಚ್.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿನ್ನಪ್ಪ (58) ಕಾಡಾನೆ ದಾಳಿಯಿಂದ ಮೃತಪಟ್ಟ ದುರ್ದೈವಿ. ಕಾಡಾನೆ ದಾಳಿಯಿಂದ ಪತ್ನಿ ಕೊಟ್ಟೂರಮ್ಮಗೆ ಗಂಭೀರ ಗಾಯವಾಗಿದ್ದು, ಗಾಯಾಳುವನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆನೆ ದಾಳಿಯಿಂದ ಎರಡು ಮನೆಗಳು ಜಖಂಗೊಂಡಿದೆ. ಬೀಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. : - –- - –