ಸಿಲಿಂಡರ್ ಸ್ಪೋಟ: ಮೂವರು ಬಾಲಕರಿಗೆ ಗಂಭೀರ ಗಾಯ… ಬೆಂಗಳೂರು, ನವೆಂಬರ್,17,2020(..):ಸಿಲಿಂಡರ್ ಸ್ಪೋಟಗೊಂಡು ಮೂವರು ಬಾಲಕರು ಗಂಭೀರ ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮಾಗಡಿ ಪಟ್ಟಣದ ರಾಜೀವ್ ಗಾಂಧಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ದರ್ಶನ್(18), ಕಿಶೋರ್(14), ಚಂದ್ರ(14) ಗಂಭೀರ ಗಾಯಗೊಂಡ ಬಾಲಕರು. ಮೂವರು ಬಾಲಕರು ಮಧ್ಯಾಹ್ನ ಅಡುಗೆ ಮಾಡಲು ಹೋದ ವೇಳೆ ಸಿಲಿಂಡರ್ ಸ್ಪೋಟಗೊಂಡು ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡ ಮೂವರು ಬಾಲಕರನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : –- –- –-