ಡಿ.7ರಿಂದ ವಿಧಾನಸೌಧದಲ್ಲೇ ಚಳಿಗಾಲದ ಅಧಿವೇಶನ- ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ… ಬೆಂಗಳೂರು,ನವೆಂಬರ್,18,2020(..):ಡಿಸೆಂಬರ್ 7ರಿಂದ ಡಿಸೆಂಬರ್ 15ರವರಗೆ ವಿಧಾನಸೌಧದಲ್ಲೇ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮಾಹಿತಿ ನೀಡಿದರು. ಇಂದು ವಿಧಾನಸೌಧಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಕೇವಲ 10 ನಿಮಿಷದಲ್ಲಿ ಸಂಪುಟ ಸಭೆ ಅಂತ್ಯವಾಯಿತು. ಸಭೆ ಬಳಿಕ ಮಾತನಾಡಿ ಕಾನೂನು ಸಚಿವ ಮಾಧುಸ್ವಾಮಿ, ಡಿ.7ರಿಂದ ವಿಧಾನಸೌಧದಲ್ಲೇ ಚಳಿಗಾಲದ ಅಧಿವೇಶನ ನಡೆಯಲಿದೆ. ಇನ್ನು ಎಸ್.ಸಿ ಮತ್ತು ಎಸ್ ಟಿ ಮೀಸಲಾತಿ ಹೆಚ್ಚಳ ಸಂಬಂಧ ಒಂದು ವಾರದಲ್ಲಿ ಸಚಿವ ಸಂಪುಟ ಉಪಸಮಿತಿ ರಚನೆಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಹಾಗೆಯೇ ಬೆಳಗಾವಿ ನಗರಸಭೆಗೆ 28.5 ಕೋಟಿ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಹೊಸಪೇಟೆಯಲ್ಲಿ ಮಾರುಕಟ್ಟೆಗೆ 13.5 ಕೋಟಿ ಮೀಸಲಿಡಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಈ ವರ್ಷ ಸಾರ್ವತ್ರಿಕ ರಜೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು. …. ’ .7 , . 18,2020 (..): .. , 10 . 7 15, . - . .28.5 . : . 7 – – -- : . 7 – – --