ಏ ವಿಧಿ, ನೀನೆಷ್ಟು ಕ್ರೂರಿ : ಚಾಲಕನ ಅಜಾಗರುಕತೆಗೆ ಮಗುವಿನ ನಗುವೇ ಸ್ಥಬ್ಧ..! . ’ . , , . ಮೈಸೂರು, ಸೆ.23,2024: (..) ತಾಯಿ ಮಡಿಲಲ್ಲಿದ್ದ ಪುಟ್ಟ ಕಂದಮ್ಮವೊಂದು ತಂದೆಯ ಒಡಲು ದಾಟಿ ಯಾರೋ ಮಾಡಿದ ತಪ್ಪಿಗೆ ದಾರುಣ ಅಂತ್ಯ ಕಂಡಿದೆ. ಬೈಕ್ ಗೆ ಹಿಂಬದಿಯಿಂದ ಗುದ್ದಿದ ಕಾರು ಚಾಲಕನ ತಪ್ಪಿಗೆ ಬದುಕಿ ಬಾಳಬೇಕಾದ ಹಾಲುಗಲ್ಲದ‌ ಹಸುಗೂಸು ಇಹಲೋಕ ತ್ಯಜಿಸಿದ ಘಟನೆ ನಡೆದಿದೆ. ಮೈಸೂರು‌ ಹೊರವಲಯದ ಇಲವಾಲ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಹಸುಗೂಸು ಮೃತಪಟ್ಟಿದೆ. ಆ ಕಂದಮ್ಮನ ಹೆಸರು ಲಿಖೇಶ್. ಕಳೆದ ತಿಂಗಳಷ್ಟೆ ಮೊದಲನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಮಗುವಿನ ಪ್ರಾಣಪಕ್ಷಿ ಇಂದು ಹಾರಿಹೋಗಿದೆ. ವೇಗವಾಗಿ ಹಿಂಬದಿಯಿಂದ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಮಗು ಸ್ಥಳದಲ್ಲೇ ಪ್ರಾಣಬಿಟ್ಟಿದೆ. ಅತ್ತ , ತಾಯಿ ಜೀವನ್ಮರಣದ ನಡುವೆ ಆಸ್ಪತ್ರೆ ಐಸಿಯುನಲ್ಲಿದ್ದರೆ ತಂದೆ ಸ್ಥಿತಿ ಅತಂತ್ರವಾಗಿದೆ. ಬದುಕು ಕಟ್ಟಿಕೊಳ್ಳಬೇಕೆಂಬ ಕಾರಣದಿಂದ ಮಗುವಿನ ಅಪ್ಪ- ಅಮ್ಮ ಇಬ್ಬರು ದೂರದ ಮಂಗಳೂರಿನ ಪುತ್ತೂರಿಗೆ ತೆರಳಿ ಶಿಕ್ಷಕ‌ ವೃತ್ತಿ ನಡೆಸುತ್ತಿದ್ದರು. ಮಗು ಚಿಕ್ಕದಿದ್ದ ಕಾರಣ ಅಜ್ಜ- ಅಜ್ಜಿಯ ನೆರಳಲ್ಲಿ ಬೆಳೆಯಲಿ ಎಂಬ ಕಾರಣಕ್ಕೆ ಮೈಸೂರಿನ ಇಲವಾಲದಲ್ಲಿ ಬಿಟ್ಟಿದ್ದರು. ಪ್ರತಿ ವಾರಾಂತ್ಯ ಬಂದರೆ ಓಡೋಡಿ ಬಂದು ಮಗು ಕಂಡು‌ ಮುದ್ದಾಡುತ್ತಿದ್ದ ಜೋಡಿಗೆ ಇನ್ನೆಲ್ಲಿ ಮಗು, ಇನ್ನೆಲ್ಲಿ ಆ ನಗು ಅನ್ನೋ ದುಸ್ಥಿತಿ ಈಗ ಎದುರಾಗಿದೆ. ಎಂದಿನಂತೆ ಶನಿವಾರ ಕೆಲ್ಸ ಮುಗಿಸಿ ಮಗು ನೋಡಲು ಇಬ್ಬರು ಮೈಸೂರಿಗೆ ಬಂದಿದ್ದಾರೆ. ಅಲ್ಲಿ ಮಗು ನೋಡಿ ಸಂತಸಪಟ್ಟು ಮದ್ಯಾಹ್ನದ ವೇಳೆಗೆ ಮತ್ತೆ ಇಲವಾಲದ ಅಜ್ಜಿ ಮನೆಗೆ ಮಗು ಬಿಡುವ ಮುನ್ನ ಸಿಟಿಗೆ ಹೋಗಲು ತೀರ್ಮಾನ ಮಾಡಿ ಬೈಕ್ ನಲ್ಲಿ ಹೊರಟಿದ್ದಾರೆ, ಮಗುವಿನ ಜೊತೆ ಕಾಲ ಕಳೆದು ಸಂಜೆ ಹೊರಡುವ ಲೆಕ್ಕಾಚಾರದಿಂದ ಬಸ್ ಟಿಕೆಟ್ ಕೂಡ ಬುಕ್ ಮಾಡಿದ್ದರು. ಆದರೆ ಅಂದುಕೊಂಡದ್ದೇ ಒಂದಾದರೆ, ಆಗಿದ್ದು ಮತ್ತೊಂದಾಗಿದೆ. ಇಲವಾಲದಿಂದ ಮಗು ಲೀಖೆಶ್ ಕರೆದುಕೊಂಡು ಸಿಟಿ ಕಡೆ ತೆರಳಿದ ಅಭಿಷೇಕ್ ದಿವ್ಯ ದಂಪತಿಯ ಬೈಕ್ ಗೆ ಹಿಂಬದಿಯಿಂದ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಗು ಹಾರಿ ಹೋಗಿದೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ದುರ್ಘಟನೆ ನಡೆದೆ ಹೋಗಿದೆ. ಅಪಘಾತದಲ್ಲಿ ಮಗು ಸ್ಥಳದಲ್ಲೇ ಮೃತ ಪಟ್ಟರೆ, ತಾಯಿ ಹಾಗು ತಂದೆ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಸ್ತೆ ಅಪಘಾತದ ದೃಶ್ಯ ಸಮೀಪದ ಪ್ರೆಟ್ರೋಲ್‌ ಬಂಕ್‌ ನ ಸಿಸಿ ಟಿವಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ ಮಗುವಿನ ಚಿಕ್ಕಮ್ಮ ಪೂಜಾಶ್ರೀ, ಮಗು ತುಂಬಾ ಚೆನ್ನಾಗಿತ್ತು, ನನ್ನ ತಂಗಿಗೆ ಆರು ವರ್ಷದಿಂದ ಮಕ್ಕಳು ಆಗಿರಲಿಲ್ಲ, ಕಳೆದ ವರ್ಷ ಮಗು ಆಯ್ತು, ಅಜ್ಜಿ ಮನೆಯಲ್ಲಿ ಮಗು ಸಾಕಲು ಬಿಟ್ಟು ಗಂಡ ಹೆಂಡ್ತಿ ಇಬ್ಬರು ದೂರದ ಪುತ್ತೂರಿನಲ್ಲಿ ಕೆಲ್ಸ ಮಾಡುತ್ತಿದ್ದರು. ರಜೆ ಅಂತ ಮಗು ನೋಡಲು ಬಂದಿದ್ರು. ಮಗು ಜೊತೆ ಕಾಲ ಕಳೆದು ಸಿಟಿಗೆ ಹೋಗುವಾಗ ಈ ಘಟನೆ ನಡೆದಿದೆ ಎಂದು ಕಣ್ಣೀರು ಹಾಕಿದರು. ಮಗುವಿನ ಅಜ್ಜಿ ಜಯಲಕ್ಷ್ಮಿ ಮಗು ನೆನೆದು ಕಣ್ಣೀರ ಕೊಡಿ ಹರಿಸಿದ್ದಾರೆ. ಅಪಘಾತ ಮಾಡಿದವರ ಮೇಲೆ ಕಠಿಣ ಕ್ರಮ ಆಗ್ಬೇಕು. ಏನು ಅರಿಯದ ಕಂದ ಸಾವನ್ನಪ್ಪಿದೆ. ಇನ್ನೂ ಪ್ರಪಂಚ ಅರಿಯದ ಕಂದ ಅದು . ನನ್ನ ಮಗಳು , ಅಳಿಯ ಆಸ್ಪತ್ರೆ ಸೇರಿದ್ದಾರೆ. ಇಡೀ ಸಂಸಾರ ಕಣ್ಣೀರು ಹಾಕುತ್ತಿದೆ. ಕಾರನ್ನು ವೇಗವಾಗಿ ಓಡಿಸಿ ಜೀವ ತೆಗೆದಿರುವವನಿಗೆ ಶಿಕ್ಷೆ ಆಗ್ಬೇಕು ನಮ್ಮ ಮಗು ನಮ್ಮನ್ನು ಬಿಟ್ಟು ಹೋಯ್ತು ಎಂದು ದುಖಃಸಿದ್ದಾರೆ. : , , , : , , ’, , ’ ! . ’ . , , .