ರಿಯಲ್ ಸ್ಟಾರ್ ಫ್ಯಾನ್ಸ್’ಗೆ ಖುಷಿ ಸುದ್ದಿ ! ಕಬ್ಜ ಮೋಷನ್ ಪೋಸ್ಟರ್ ರಿಲೀಸ್ ಬೆಂಗಳೂರು, 17 ನವೆಂಬರ್ 2020:ಬಹಳ ದಿನಗಳ ಬಳಿಕ ಉಪ್ಪಿ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಹೌದು. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಮೂಲಕ ಫ್ಯಾನ್ಸ್ ಖುಷಿ ಹೆಚ್ಚಾಗಿದೆ. ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಎಂಟು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರೈಸಿರುವ ಚಿತ್ರ ತಂಡ ಈಗ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲು ನಿರ್ಧರಿಸಿದೆ. 80 ರ ದಶಕದ ಅಂಡರ್ ವರ್ಲ್ಡ್ ಕತೆಯನ್ನೊಳಗೊಂಡ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಯಿದೆ.