ಮೈಸೂರಿನಲ್ಲಿ ಯುವತಿಗೆ ಚಾಕು ಇರಿತ : ಪ್ರೇಮ ವೈಪಲ್ಯದ ಶಂಕೆ ಮೈಸೂರು,ನವೆಂಬರ್,15,2020(..): ಯುವಕನೋರ್ವ ಯುವತಿಗೆ ಚಾಕುವಿನಿಂದ ಇರಿದಿರುವ ಘಟನೆ ಭಾನುವಾರ ನಡೆದಿದೆ. ನಗರದ ಕೆ.ಆರ್ ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಇರಿತಕ್ಕೆ ಒಳಗಾದ ಯುವತಿ ಅಶ್ವಿನಿ(19) ಎಂದು ತಿಳಿದು ಬಂದಿದೆ. ಮನೆ ಮುಂದೆ ನಿಂತಿದ್ದ ಯುವತಿಗೆ ಯುವಕ ಗಗನ್ ಅಲಿಯಾಸ್ ಕೆಂಚನಿಂದ ಚಾಕು ಇರಿದಿದ್ದಾನೆ. ಚಾಕು ಇರಿತಕ್ಕೆ ಒಳಗಾದ ಯುವತಿ ಅಶ್ವಿನಿ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಪ್ರೇಮ ವೈಫಲ್ಯ ಕಾರಣ ಎಂಬ ಶಂಕೆ ಮೂಡಿದ್ದು, ಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. : ------