ಪಟಾಕಿ ಸಿಡಿಸುವ ವೇಳೆ 10 ಮಂದಿಗೆ ಗಾಯ: ಆಸ್ಪತ್ರೆಗೆ ದಾಖಲು… ಬೆಂಗಳೂರು,ನವೆಂಬರ್,15,2020(..):ದೀಪಾವಳಿ ಹಬ್ಬ ಸಂಭ್ರಮದಲ್ಲಿ ಪಟಾಕಿ ಸಿಡಿಸುತ್ತಿದ್ದ ವೇಳೆ 10 ಮಂದಿಗೆ ಗಾಯಗಳಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ವಿಜಯಾನಂದ ನಗರದ ನಿವಾಸಿಯಾಗಿರುವ ಬಾಲಕ ಮಾಸ್ಟರ್ ಎಸ್ (12) ಪಟಾಕಿ ಸಿಡಿಸುವ ವೇಳೆ ಈ ಘಟನೆ ನಡೆದಿದೆ. 10 ಮಂದಿಗೆ ಗಾಯಗಳಾಗಿದ್ದು ಈ ಪೈಕಿ 4 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ ಎನ್ನಲಾಗಿದೆ. ಮಿಂಟೋ ಅಸ್ಪತ್ರೆಯಲ್ಲಿ ಒಬ್ಬರು, ನಾರಾಯಣ ಆಸ್ಪತ್ರೆಯಲ್ಲಿ ನಾಲ್ಕು ಮಂದಿ, ನೇತ್ರಧಾಮದಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಷ್ಟೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಪಟಾಕಿ ಸಿಡಿಸುವುದಕ್ಕೆ ಸರ್ಕಾರ ನಿರ್ಬಂಧ ವಿಧಿಸಿದೆ. ಈ ಮಧ್ಯೆಯೂ ಪಟಾಕಿ ಸಿಡಿಸುವ ವೇಳೆ 10 ಮಂದಿ ಗಾಯಗೊಂಡಿದ್ದಾರೆ. : 10 - –- --