ಸಂಸದೆ ಸುಮಲತಾ ಅಂಬರೀಶ್ ರನ್ನ ಟೀಕಿಸಿದ ಪ್ರತಾಪ್ ಸಿಂಹ ವಿರುದ್ಧ ಅಂಬಿ ಅಭಿಮಾನಿಗಳಿಂದ ಆಕ್ರೋಶ… ಮೈಸೂರು,ನವೆಂಬರ್,14,2020(..):ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನ ಟೀಕಿಸಿದ ಹಿನ್ನೆಲೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಅಂಬರೀಶ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಸಂಸದ ಪ್ರತಾಪ್‌ಸಿಂಹ ವಿರುದ್ದ ವಾಗ್ದಾಳಿ ನಡೆಸಿದ ಅಂಬರೀಶ್‌ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಮಂಡ್ಯ ಜನರ ಸ್ವಾಭಿಮಾನವನ್ನ ಕೆಣಕಬೇಡಿ. ಇದು ಪ್ರತಾಪ್‌ ಸಿಂಹರವರ ಸಣ್ಣತನದ ಹೇಳಿಕೆ. ತೋರ್ಪಡಿಕೆಗೋಸ್ಕರ ಉಡಾಫೆ ಹೇಳಿಕೆ ಕೊಟ್ಟಿದ್ದಾರೆ. ಇದು ಬಿಜೆಪಿಯ ಹೇಳಿಕೆಯಲ್ಲ, ಪ್ರತಾಪ್‌ ಸಿಂಹರ ಸಣ್ಣತನದ ಹೇಳಿಕೆ. ಭ್ರಷ್ಟ ಅಧಿಕಾರಿಯನ್ನ ಸಮರ್ಥಿಸುವ ಭರದಲ್ಲಿ ಸುಮಲಾತ ಅಂಬರೀಶ್ ವಿರುದ್ದ ಟೀಕೆ ಮಾಡಿದ್ದಾರೆ. ನೀವೇನೂ ಮೈಸೂರನ್ನ ಸಿಂಗಾಪುರ ಮಾಡಿದ್ದೀರಾ..? ಎಂದು ಪ್ರಶ್ನಿಸಿದ್ದಾರೆ. ಪ್ರತಾಪ್‌ ಸಿಂಹರ ಈ ಹೇಳಿಕೆ ಪ್ರಜ್ಞಾವಂತ ಮೈಸೂರು ಜನತೆ ತಲೆ ತಗ್ಗಿಸುವಂತಹದ್ದು. ಮೈಸೂರಿಗೆ ಪ್ರಧಾನಿ ಬಂದ ವೇಳೆ ಸುಮಲತಾ ಹೆಸರೇಳಿದ್ದಾರೆ. ಪ್ರತಾಪ್‌ ಸಿಂಹರ ಹೆಸರೇಳಿಲ್ಲ, ಅಲ್ಲೆ ಗೊತ್ತಾಗುತ್ತೆ ನಿಮ್ಮ ಯೋಗ್ಯತೆ ಏನು ಅಂತ. ಮಂಡ್ಯ ಜನರು, ಸುಮಲತಾ ಅಂಬರೀಶ್‌ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ತಮಗಿಲ್ಲ ಎಂದು ಬೇಲೂರು ಸೋಮಶೇಖರ್ ಕಿಡಿಕಾರಿದರು. ಸಂಸದ ಪ್ರತಾಪ್ ಸಿಂಹ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಟೀಕಿಸಿರುವ ವಿಡಿಯೋ ಭಾರಿ ವೈರಲ್ ಆಗಿತ್ತು. ಯಲಿಯೂರಿನಲ್ಲಿ ಅಹವಾಲು ಸ್ವೀಕರಿಸುವ ವೇಳೆ ಬೆಂಗಳೂರು-ಮೈಸೂರು ದಶಪಥ ಕಾಮಗಾರಿ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಬಳಿ ಅಧಿಕಾರಿಯೊಬ್ಬರು ಸಂಸದೆ ಸುಮಲತಾ ವಿರುದ್ಧ ದೂರು ನೀಡಿದ್ದರು. ಸುಮಲತಾ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ ಎಂದು ದೂರು ನೀಡಿದ್ದರು. ಈ ವೇಳೆ ಪ್ರತಿಕ್ರಿಯಿಸಿದ್ದ ಸಂಸದ ಪ್ರತಾಪ್ ಸಿಂಹ, ಹೆಚ್.ಡಿ. ದೇವೇಗೌಡರ ಕುಟುಂಬವನ್ನು ಸೋಲಿಸಲು ಮಂಡ್ಯದಲ್ಲಿ ಸುಮಲತಾ ಅವರನ್ನು ಗೆಲ್ಲಿಸಿದರು. ಆದರೆ ಅವರು ಯಾವುದೇ ಕೆಲಸ ಮಾಡುವುವವರಲ್ಲ. ಮಂಡ್ಯಕ್ಕೆ ಸಂಬಂಧಿಸಿದ ಏನೇ ಕೆಲಸಗಳಿದ್ದರೂ ನನಗೆ ಹೇಳಿ ಎಂದಿದ್ದ ವಿಡಿಯೋ ವೈರಲ್ ಆಗಿತ್ತು. : - - - – - -