ಇದೊಂದು ವರ್ಷ ಪಟಾಕಿ ಮಾರಾಟಕ್ಕೆ ಅನುಮತಿ ಕೊಡಿ- ಡಿಸಿಪಿ ಪ್ರಕಾಶ್ ಗೌಡರ ಕಾಲಿಗೆ ಬಿದ್ದು ಮನವಿ ಮಾಡಿದ ವ್ಯಾಪಾರಿ… ಮೈಸೂರು,ನವೆಂಬರ್,14,2020(..):ಈ ಬಾರಿ ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಮೈಸೂರಿನ ಜೆ.ಕೆ. ಮೈದಾನದಲ್ಲಿನ ಪಟಾಕಿ ಮಳಿಗೆಗಳಿಗೆ ಡಿಸಿಪಿ ಪ್ರಕಾಶ್ ಗೌಡ ಭೇಟಿ ನೀಡಿ ಪರಿಶೀಲಿಸಿದರು. ಜೆಕೆ ಮೈದಾನದ ಎಲ್ಲಾ ಪಟಾಕಿ ಮಳಿಗೆಗಳಿಗೂ ಭೇಟಿ ನೀಡಿ ಬಾಕ್ಸ್ ಒಳಗಿರುವ ಪಟಾಕಿಗಳನ್ನು ಪರಿಶೀಲಿಸಿದ ಪ್ರಕಾಶ್ ಗೌಡ, ಕೇವಲ ಹಸಿರು ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡುವಂತೆ ಸೂಚನೆ ನೀಡಿದರು. ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡದಂತೆ ಸೂಚಿಸಿದರು. ಒಂದು ವೇಳೆ ನಿಷೇಧಿತ ಪಟಾಕಿಗಳನ್ನು ಮಾರಾಟ ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಡಿಸಿಪಿ ಪ್ರಕಾಶ್ ಗೌಡರ ಕಾಲಿಗೆ ಬಿದ್ದ ಪಟಾಕಿ ವ್ಯಾಪಾರಿ.. ಇದೇ ವೇಳೆ ಪಟಾಕಿ ಮಾರಾಟಗಾರರು ಕಣ್ಣೀರು ಹಾಕಿಕೊಂಡು ಇದೊಂದು ವರ್ಷ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವಂತೆ ಡಿಸಿಪಿ ಪ್ರಕಾಶ್ ಗೌಡರ ಬಳಿ ಕೈ ಮುಗಿದು ಪರಿ ಪರಿಯಾಗಿ ಬೇಡಿಕೊಂಡರು.. ಈ ಸಮಯದಲ್ಲಿ ಪಟಾಕಿ ಮಾರಾಟಗಾರನೊಬ್ಬ ಪ್ರಕಾಶ್ ಗೌಡರ ಕಾಲಿಗೆ ಬಿದ್ದ ಘಟನೆ ನಡೆಯಿತು. …. ’ , . 14, 2020 (..): , , .. . . , , . : –-- - : –-- -