ನಿಮ್ಮ ಮೊಗದಲ್ಲಿ ಸಂತೋಷ ನೋಡಿದರೇ ನಮ್ಮ ಮೊಗದಲ್ಲಿ ಸಂತೋಷ-ಯೋಧರ ಜತೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ… ಜೈಸಲ್ಮೇರ್,ನವೆಂಬರ್,14,2020(..):ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷದಂತೆ ಈ ಬಾರಿಯೂ ದೇಶ ಕಾಯುವ ವೀರ ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡಿದ್ದಾರೆ. ರಾಜಸ್ತಾನದ ಜೈಸಲ್ಮೇರ್‍ ನ ಲಾಂಗ್ ವಾಲಾ ಗಡಿ ಪ್ರದೇಶದಲ್ಲಿ ಬಿಎಸ್‍ಎಫ್ ಯೋಧರಿಗೆ ಪ್ರಧಾನಿ ಮೋದಿ ಸಿಹಿ ತಿನಿಸಿ ಉಡುಗೊರೆಗಳನ್ನು ನೀಡಿ ದೀಪಾವಳಿ ಆಚರಿಸಿಕೊಂಡಿದ್ದಾರೆ. ಪ್ರಧಾನಿ ಮೋದಿಗೆ ಭಾರತೀಯ ಸಶಸ್ತ್ರ ಪಡೆಗಳ ಮಹಾ ದಂಡನಾಯಕ ಜನರಲ್ ಬಿಪಿನ್ ರಾವತ್ , ಭೂ ಸೇನೆ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಮತ್ತು ಬಿಎಸ್‍ಎಫ್ ಮಹಾ ನಿರ್ದೇಶಕ ರಾಜೇಶ್ ರಾಕೇಶ್ ಆಸ್ತಾನ ಅವರು ಸಾಥ್ ನೀಡಿದರು. ದೇಶಕಾಯುವ ಯೋಧರಿಗೆ ದೀಪಾವಳಿ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ದೇಶ ಸೇವೆಯಲ್ಲಿ ತೊಡಗಿರುವ ಯೋಧರಿಗೆ ಅಭಿನಂದನೆ. ಯೋಧರಿದ್ದರೇ ಈ ದೇಶ, ಅವರಿಂದ ಈ ಹಬ್ಬ ಆಚರಣೆ. ದೇಶದ ಜನರು ನೆಮ್ಮದಿಯಿಂದ ಹಬ್ಬ ಆಚರಿಸುತ್ತಿದ್ದಾರೆ ಇದಕ್ಕೆ ಕಾರಣ ಯೋಧರು. ಯೋಧರ ಜತೆ ಹಬ್ಬ ಆಚರಿಸಿದರೇ ಮಾತ್ರ ಸಂತೋಷ. ನಿಮ್ಮ ಮೊಗದಲ್ಲಿ ಸಂತೋಷ ನೋಡಿದಾಗ ನಮ್ಮ ಮೊಗದಲ್ಲಿ ಸಂತೋಷವಿರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು. : - –- -