ಮಕ್ಕಳ ದಿನಕ್ಕೆ ಸ್ಪೆಷಲ್ ವೀಡಿಯೋ ಪೋಸ್ಟ್ ಮಾಡಿದ ಪವರ್ ಸ್ಟಾರ್ ! ಬೆಂಗಳೂರು, ನವೆಂಬರ್ 14, 2020 (..):ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಕ್ಕಳ ದಿನಾಚರಣೆಗೆ ವಿಶಿಷ್ಟವಾಗಿ ವಿಶ್ ಮಾಡಿದ್ದಾರೆ. ಹೌದು. ವಿದೇಶದ ಪುಟಾಣಿಯೊಂದು ತಮ್ಮ ಸಿನಿಮಾದ ಹಾಡುಗಳನ್ನು ಹಾಡುವ ವಿಡಿಯೋಗಳನ್ನು ಅಪ್ಪು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ವಿದೇಶೀ ಮಗುವೊಂದು ಕಣ್ಣಿಗೆ ಕಾಣುವ ದೇವರು ಎಂದರೆ ಹಾಡನ್ನು ಹಾಡುವ ವಿಡಿಯೋ ಹಾಗೂ ಇಬ್ಬರು ಭಾರತೀಯ ಕುಡಿಗಳು ಬಾನ ದಾರಿಯಲ್ಲಿ ಹಾಡುವ ವಿಡಿಯೋವನ್ನು ಹಂಚಿಕೊಂಡು ಮಕ್ಕಳ ದಿನಾಚರಣೆ ಶುಭ ಕೋರಿದ್ದಾರೆ.