ಸಚಿವ ಸಂಪುಟ ವಿಸ್ತರಣೆ ವಿಚಾರ: ನೂರಕ್ಕೆ ನೂರರಷ್ಟು ಸಿಎಂಗೆ ಫ್ರಿ ಹ್ಯಾಂಡ್ ನೀಡಿದ್ದೇವೆ- ಸಚಿವ ಕೆ.ಎಸ್ ಈಶ್ವರಪ್ಪ… ಬೆಂಗಳೂರು,ನವೆಂಬರ್,13,2020(..):ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ವಿಚಾರ. ನೂರಕ್ಕೆ ನೂರರಷ್ಟು ಸಿಎಂಗೆ ಫ್ರಿ ಹ್ಯಾಂಡ್ ನೀಡಿದ್ದೇವೆ. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದನ್ನ ಅವರೇ ತೀರ್ಮಾನ ಮಾಡುತ್ತಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು. ಸಚಿವ ಸಂಪುಟ ವಿಸ್ತರಣೆ ಕುರಿತು ಇಂದು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಈ ಬಗ್ಗೆ ನೂರಕ್ಕೆ ನೂರರಷ್ಟು ಸಿಎಂಗೆ ಫ್ರಿ ಹ್ಯಾಂಡ್ ನೀಡಿದ್ದೇವೆ. ಅವರು ಕೇಂದ್ರದ ವರಿಷ್ಠರ ಜತೆ ಮಾತನಾಡಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಿರುತ್ತೇವೆ ಎಂದು ನುಡಿದರು. : - - – - - .