ಇವಿಎಂ ರದ್ದು ಮಾಡಿ ಬ್ಯಾಲೆಟ್ ಪೇಪರ್ ಗೆ ಎಲ್ಲಾ ಪಕ್ಷಗಳು ಆಗ್ರಹಿಸಲಿ- ಸಂಸದ ಡಿ.ಕೆ ಸುರೇಶ್ …. ಬೆಂಗಳೂರು,ನವೆಂಬರ್,13,2020(..):ಬಿಹಾರದಲ್ಲಿ ಇವಿಎಂ ದುರ್ಬಳಕೆ ಬಗ್ಗೆ ಆರೋಪ ಕೇಳಿ ಬಂದಿದೆ. ಹೀಗಾಗಿ ಇವಿಎಂ ರದ್ದು ಮಾಡಿ ಬ್ಯಾಲೆಟ್ ಪೇಪರ್ ಗೆ ಎಲ್ಲಾ ಪಕ್ಷಗಳು ಆಗ್ರಹಿಸಲಿ ಕಾಂಗ್ರಸ್ ಸಂಸದ ಡಿ.ಕೆ ಸುರೇಶ್ ಆಗ್ರಹಿಸಿದರು. ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಡಿ.ಕೆ ಸುರೇಶ್, ಇವಿಎಂ ಮಾಡಿರುವುದು ಮನುಷ್ಯರು. ಹೀಗಾಗಿ ಇವಿಎಂ ದುರ್ಬಳಕೆಯಾಗುವ ಅವಕಾಶವಿದೆ. ಚುನಾವಣಾ ಆಯೋಗ ಮೂಕಪ್ರೇಕ್ಷಕನಂತಾಗಿದೆ. ಇದೇ ರೀತಿ ನಡೆದರೇ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ ಎಂದು ತಿಳಿಸಿದರು. ಬಿಹಾರದಲ್ಲಿ ಇವಿಎಂ ದುರ್ಬಳಕೆ ಬಗ್ಗೆ ಆರೋಪ ಕೇಳಿ ಬಂದಿದೆ. ಇವಿಎಂ ರದ್ದು ಮಾಡಿ ಬ್ಯಾಲೆಟ್ ಪೇಪರ್ ಗೆ ಎಲ್ಲಾ ಪಕ್ಷಗಳು ಆಗ್ರಹಿಸಬೇಕು ಎಂದು ಸಂಸದ ಡಿ.ಕೆ ಸುರೇಶ್ ಆಗ್ರಹಿಸಿದರು. : - – – – - - .