ಇಂದು ಸಂಜೆ ವಿಜಯನಗರ ವೈಭವ ಸಾರುವ ”ಹಂಪಿ ಉತ್ಸವ” ಬಳ್ಳಾರಿ,ನವೆಂಬರ್,13,2020(..) ; ಹೊಸಪೇಟೆ ತಾಲೂಕಿನಲ್ಲಿವಿಜಯನಗರ ವೈಭವ ಸಾರುವ ಹಂಪಿ ಉತ್ಸವ ಇಂದು ಸಂಜೆ4ಕ್ಕೆ ನಡೆಯಲಿದೆ.ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ವಿವಿಧ ಜಾನಪದ ಕಲಾ ತಂಡಗಳಿಂದ ಶೋಭಾಯಾತ್ರೆ ನಡೆಯಲಿದೆ. ವಿವಿಧ ತಾಲೂಕುಗಳಿಂದ ವಿವಿಧ ಪ್ರಕಾರದ ಜಾನಪದ ಕಲಾ ತಂಡಗಳ ಪ್ರದರ್ಶನ ಶೋಭಾಯಾತ್ರೆಗೆ ಮೆರುಗು ನೀಡಲಿದೆ. ಇದಾದ ನಂತರ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಸಂಜೆ 7ಕ್ಕೆ ತುಂಗಾ ಆರತಿ ಕಾರ್ಯಕ್ರಮ ಹಂಪಿಯ ತುಂಗಭದ್ರಾ ದಡದ ವೇದಿಕೆ ಬಳಿ ಸಂಜೆ 7ಕ್ಕೆ ತುಂಗಾ ಆರತಿ ಕಾರ್ಯಕ್ರಮ ನಡೆಯಲಿದೆ. ಪ್ರತಿ ಹಂಪಿ ಉತ್ಸವದಲ್ಲಿ ನಡೆದಂತೆ ಈ ಹಂಪಿ ಉತ್ಸವದಲ್ಲಿಯೂ ತುಂಗಾ ಆರತಿ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್‌. ಆನಂದಸಿಂಗ್‌ ಹಾಗೂ ಮುಖ್ಯ ಅತಿಥಿಗಳು, ಅತಿಥಿಗಳು ಮತ್ತು ವಿಶೇಷಆಹ್ವಾನಿತರು ಉಪಸ್ಥಿತರಿರಲಿದ್ದಾರೆ. : -----