ಭೂ ಮಾಲೀಕರ ಜಂಟಿ ಸಹಭಾಗಿತ್ವದಲ್ಲಿ ಮುಡಾ ಬಡಾವಣೆ ಅಭಿವೃದ್ಧಿ: ಭೂ ಮಾಲೀಕರಿಗೆ ಮುಂಗಡವಾಗಿ 10 ಲಕ್ಷ ರೂ. ಮೈಸೂರು,ನವೆಂಬರ್,12,2020(..):ಮುಡಾ ಹಾಗೂ ಭೂ ಮಾಲೀಕರ ಜಂಟಿ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿ ಯೋಜನೆ ಅನುಷ್ಟಾನ ಮಾಡಲಾಗುತ್ತದೆ. ಜಂಟಿ ಸಹಭಾಗಿತ್ವದಡಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಭೂ ಮಾಲೀಕರರೊಂದಿಗೆ ಒಡಂಬಡಿಕೆ ಮಾಡಿಕೊಂಡು ಬಳಿಕ 18 ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲಾಗುತ್ತದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು. ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಪರಸ್ಪರ ಒಪ್ಪಿಗೆ ಪತ್ರ ನೀಡಿ ಒಪ್ಪಂದದ ಕರಾರಿಗೆ ಒಳಪಡುವ ಭೂ ಮಾಲೀಕರಿಗೆ ಮುಂಗಡವಾಗಿ 10 ಲಕ್ಷ ರೂಪಾಯಿ ನೀಡಲಾಗುವುದು. ಯೋಜನೆಯ ಪ್ರಕಾರ ಭೂ ಮಾಲೀಕರಿಗೆ ವಸತಿ ವಲಯದ ಶೇಕಡಾ 50-50 ರ ಅನುಪಾತದಡಿ ಪ್ರತಿ ಎಕರೆಗೆ 30×40 ಚದರ ಅಡಿ ಅಳತೆಯ ಅಂದಾಜು 9 ನಿವೇಶನಗಳನ್ನು ನೀಡಲಾಗುವುದು. ಭೂ ಮಾಲೀಕರಿಗೆ ಮೂಲೆ ಅಥವಾ ವಾಣಿಜ್ಯ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದಿಲ್ಲ. ಹಂಚಿಕೆ ಪಡೆದ ಭೂ ಮಾಲೀಕರು ನಿವೇಶನಗಳನ್ನು ಇತರರಿಗೆ ಮಾರಾಟ ಮಾಡುವ ಹಕ್ಕನ್ನು ಹೊಂದಿರುತ್ತಾರೆ ಎಂದು ಮಾಹಿತಿ ನೀಡಿದರು. ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭೆ ನಿರ್ಣಯದಂತೆ ಅಕ್ರಮಗಳನ್ನು ತಡೆಯಲು ಜಾಗೃತದಳ ರಚನೆ ಮಾಡಲಾಗುತ್ತಿದೆ. ಖಾಸಗಿ ಬಡಾವಣೆ ಅಭಿವೃದ್ಧಿಕಾರರು ಹಾಗೂ ಅಕ್ರಮ ಒತ್ತುವರಿಯ ಮೇಲೆ ಜಾಗೃತಿದಳ ನಿಗಾ ಇಡಲಿದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದರು. … : . 10 , .12, 2020 (..): (), . .. , , , 18 .“ . 10 . , 9 30×40 . 50:50 . , . ,” . : - - - - – - - .