ಮೈಸೂರು: ಜೀವ ಹೋಗುತ್ತಿದ್ದವನಿಗೆ ರಕ್ಷಕರಾಗಿ ಮಾನವೀಯತೆ ಮೆರೆದ ಆರಕ್ಷಕರು ಎಚ್.ಡಿ.ಕೋಟೆಯ ಎಡತೊರೆ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ. ಮೈಸೂರು:ಅಪಘಾತದಲ್ಲಿ‌ ಗಾಯಗೊಂಡು ತೀವ್ರ ರಕ್ತಸ್ರವಾದಿಂದ ನರಳಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಆರಕ್ಷಕರು ರಕ್ಷಕರಾಗಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಎಡತೊರೆ ಬಳಿ ಬೈಕ್ ಸವಾರರಿಬ್ಬರು ಮುಖಾ ಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು , ಮತ್ತೋರ್ವ ಸ್ಥಿತಿ ಚಿಂತಾಜನಕವಾಗಿತ್ತು.ಘಟನೆ ನಡೆದು ಗಂಟೆಗಳಾದರು ಅಂಬ್ಯುಲೆನ್ಸ್ ಬಾರದ ಕಾರಣ ತಕ್ಷಣ ಪೋಲಿಸ್ ಇಲಾಖೆಯ ಹೈವೆ ಪೆಟ್ರೋಲ್ ವಾಹನದ ದಫೆದಾರ್ ಗೋವಿಂದರಾಜು ಮತ್ತು ಎ ಎಸ್ ಐಮರಿಗೌಡರವರು ಕಾರ್ಯಪ್ರವೃತ್ತಿಯಾಗಿ ಆತನನ್ನು ಎಚ್.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ವ್ಯಕ್ತಿಯ ಜೀವವನ್ನು ಉಳಿಸಿ ಮಾನವೀಯತೆ ಮೆರೆದಿದ್ದಾರೆ..