ಸಂವಿಧಾನದ ಪೀಠಿಕೆ ಓದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ ರಾಯಚೂರು,ನವೆಂಬರ್,12,2020 :ರಾಯಚೂರು ಜಿಲ್ಲೆಯ ಯುವ ಜೋಡಿ ಬುದ್ಧ, ಬಸವ ಹಾಗೂ ಅಂಬೇಡ್ಕರ್‌, ಜ್ಯೋತಿಬಾಫುಲೆ ಹಾಕಿಕೊಟ್ಟ ಆದರ್ಶ ಪಥ ಸ್ಮರಿಸಿ, ಸಂವಿಧಾನದ ಪೀಠಿಕೆ ಓದುವ ಮೂಲಕ ಪರಸ್ಪರ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.ಮಸ್ಕಿ ತಾಲ್ಲೂಕಿನ ಗೋನಾಳ ಗ್ರಾಮದ ರಂಗಭೂಮಿ ಕಲಾವಿದ ಧರ್ಮರಾಜ್‌ ಗೋನಾಳ ಹಾಗೂ ಅದೇ ತಾಲ್ಲೂಕಿನ ಚಿಕ್ಕ ಕಡಬೂರಿನ ಗೌರಮ್ಮ ಅವರು ಯಾವುದೇ ಸಂಪ್ರದಾಯದ ಕಟ್ಟುಪಾಡು, ವಾದ್ಯಗಳ ಸದ್ದಿಲ್ಲದೇ, ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆರ್‌ವೈಎಫ್‌ನ ರಾಜ್ಯ ಸಂಚಾಲಕ ನಾಗರಾಜ ಪೂಜಾರ, ಪ್ರಗತಿಪರ ಚಿಂತಕರಾದ ದೇವರಾಜ, ಮಂಜು ಸಾಸಲಮರಿ, ಸೋಮನಾಥ, ಸಿದ್ದು ಉದ್ಬಾಳ, ಮರಿದೇವ, ಕಿರಣ್ ಕುಮಾರ ಹಾಗೂ ಮಲ್ಲಿಕಾರ್ಜುನ ಸೇರಿದಂತೆ ಸಮಾನ ಮನಸ್ಕರ ಗೆಳೆಯರ ತಂಡ ಭಾಗವಹಿಸಿ ಶುಭ ಹಾರೈಸಿದ್ದಾರೆ. … , . 12, 2020 (..): , , , , . , , . .: -- : ------