ಡ್ರಗ್ಸ್ ಪ್ರಕರಣಕ್ಕೆ ಸಹಾಯ ಮಾಡಿದ ಹೆಡ್ ಕಾನ್ಸ್ ಟೇಬಲ್ ಅಮಾನತು ಬೆಂಗಳೂರು,ನವೆಂಬರ್,12,2020(..): ಡಾರ್ಕ್ ವೆಬ್ ಮೂಲಕ ವಿದೇಶದಿಂದ ಡ್ರಗ್ಸ್ ಆಮದು ಕೇಸ್ ಗೆ ಸಂಬಂಧಿಸಿ ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಡಿ ಹೆಡ್ ಕಾನ್ಸ್ ಟೇಬಲ್ ಪ್ರಭಾಕರ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ. ಆರೋಪಿಗಳು ಕೇಳಿದ್ದ ವ್ಯಕ್ತಿಗಳ ಲೊಕೇಷನ್ ಹಾಗೂ ಇತರೆ ಮಾಹಿತಿ ನೀಡಿ ನೆರವಾಗಿದ್ದ ಆರೋಪದಡಿ ಸದಾಶಿವನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಪ್ರಭಾಕರ್ ನನ್ನು ಸಸ್ಪೆಂಡ್ ಮಾಡಲಾಗಿದೆ. ಚಾಮರಾಜಪೇಟೆ ಪೋಸ್ಟ್ ಆಫೀಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಸಿಬ್ಬಂದಿ ಜೊತೆ ಆರೋಪಿಗಳ ಸಂಪರ್ಕವಿದೆ ಎಂದು ತಿಳಿದು ಬಂದಿದೆ. : -------