ಇಲಾಖೆ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲವೆಂದ ಮೇಲೆ ಏನು ಕೆಲಸ ಮಾಡ್ತೀರಿ..? ಜಿ.ಪಂ ಅಧ್ಯಕ್ಷೆ ಪರಿಮಳ ಶ್ಯಾಮ್ ತರಾಟೆ… ಮೈಸೂರು,ನವೆಂಬರ್,11,2020(..): ಯುವಜನ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಓಂ ಪ್ರಕಾಶ್ ಅವರಿಗೆ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಮ್ ತರಾಟೆ ತೆಗೆದುಕೊಂಡಿದ್ದಾರೆ. ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ಆರಂಭವಾದ ಕೆಡಿಪಿ ಸಭೆಯಲ್ಲಿ ಈ ಘಟನೆ ನಡೆಯಿತು. ಯುವಜನ ಹಾಗೂ ಕ್ರೀಡಾ ಇಲಾಖೆಯಲ್ಲಿ ಕಳೆದ ಸಾಲಿನ ಅನುದಾನದ 78 ಲ್ಯಾಪ್ಸ್ ಯುವಜನ ಹಾಗೂ ಕ್ರೀಡಾ ಇಲಾಖೆಯಲ್ಲಿ ಕಳೆದ ಸಾಲಿನ ಅನುದಾನದ 78 ಲ್ಯಾಪ್ಸ್ ಆಗಿರುವ ಹಿನ್ನೆಲೆ ಯುವಜನ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಓಂ ಪ್ರಕಾಶ್ ಗೆ ಪರಿಮಳ ಶ್ಯಾಮ್ ತರಾಟೆ ತೆಗೆದುಕೊಂಡರು. ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ ಇಲಾಖೆ ಕಾರ್ಯಯೋಜನೆಗಳ ಕುರಿತು ಮಾಹಿತಿ ಇಲ್ಲ. ಓಂ ಪ್ರಕಾಶ್ ಅವರು ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ ಇಲಾಖೆ ಕಾರ್ಯಯೋಜನೆಗಳ ಕುರಿತು ಮಾಹಿತಿ ಇಲ್ಲ. ಹಿಂದಿನ ಇಲಾಖಾ ಅಧಿಕಾರಿ ನನಗೆ ಇಲಾಖೆಯ ಕಾರ್ಯಯೋಜನೆಗಳ ಮಾಹಿತಿ ನೀಡಿಲ್ಲವೆಂದು ಹೇಳಿದರು. ಇದಕ್ಕೆ ಗರಂ ಆದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಂ, ಇಲಾಖೆ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲವೆಂದ ಮೇಲೆ ಏನು ಕೆಲಸ ಮಾಡುತ್ತೀರಿ, ಸಭೆಗೆ ಇಲಾಖೆಯ ಪೂರ್ವಾಪರ ಮಾಹಿತಿ ಇಲ್ಲವೆಂದ ಮೇಲೆ ಏಕೆ ಬರುತ್ತೀರಿ? ಎಂದು ಕಿಡಿಕಾರಿದರು. ಪ್ರಗತಿ ಪರಿಶೀಲನೆ ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಜರಾಗಿದ್ದರು. : ----- ?- -