ಹವಾಲ ದಂಧೆಯಲ್ಲಿ ತೊಡಗಿದ್ದ ಆರೋಪಿ ಅಂದರ್… ಬೆಂಗಳೂರು,ನವೆಂಬರ್,10,2020(..):ಹವಾಲ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪಂಕಜ್ ಪಟೇಲ್ ಬಂಧಿತ ಆರೋಪಿ. ಆರೋಪಿ ಪಂಕಜ್ ಪಟೇಲ್ ಮನೆಯಲ್ಲಿ ಲಕ್ಷಾಂತರ ರೂ ಇಟ್ಟುಕೊಂಡಿದ್ದ. ಹವಾಲ ಮೂಲಕ ಹಣ ಬೇರೆಯವರಿಗೆ ವರ್ಗಾವಣೆ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಬ್ಬನ್ ಪೇಟೆಯ ಪಂಕಜ್ ಪಟೇಲ್ ನಿವಾಸದ ಮೇಲೆ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನ ಮನೆಯಲ್ಲಿದ್ಧ 28 ಲಕ್ಷರೂ ಹಣ ಮತ್ತು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - ----