ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ನವ ವಧು-ವರ ನೀರುಪಾಲು ಮೈಸೂರು,ನವೆಂಬರ್,09,2020(..): ಪ್ರೀ ವೆಡ್ಡಿಂಗ್ ಫೋಟೋಗಳೇ ಜೀವನದ ಕೊನೆಯಾದವು. ಮೈಸೂರು ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ. ಮದುವೆಗೂ ಮುನ್ನವೇ ವಧು-ವರ ಧಾರುಣ ಸಾವು ತಿ.ನರಸೀಪು ತಾಲೂಕಿನ ಮುಡುಕುತೊರೆ ಬಳಿ ಫೋಟೋಶೂಟ್​ ನಡೆಸುವ ಸಂದರ್ಭ ತೆಪ್ಪ ಮಗುಚಿ ಮದುವೆಗೂ ಮುನ್ನವೇ ವಧು-ವರ ಧಾರುಣ ಸಾವನ್ನಪ್ಪಿದ್ದಾರೆ. ಮೂಲತಃ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು(28), ಶಶಿಕಲಾ(20) ಮೃತ ದುರ್ದೈವಿಗಳು. ನ.22ರಂದು ಚಂದ್ರು, ಶಶಿಕಲಾ ಮದುವೆ ನಿಶ್ಚಯವಾಗಿತ್ತು. ಪ್ರೀ ವೆಡ್ಡಿಂಗ್​ ಫೋಟೋಶೂಟ್ ಮಾಡಿಸಲು ಕಾವೇರಿ ನದಿ ಮಧ್ಯೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದರು. ಮದುವೆ ಹುಡುಗ, ಹುಡುಗಿಗೆ ಒಂದು ತೆಪ್ಪ ಹಾಗೂ ಫೋಟೋಗ್ರಾಫರ್, ಸಂಬಂಧಿಕರಿಗೆ ಮತ್ತೊಂದು ತೆಪ್ಪ. ಹೀಗೆ ಎರಡು ತೆಪ್ಪದಲ್ಲಿ ಹೋಗಿದ್ದರು. ಹರಿಯುವ ನೀರಲ್ಲಿ ತೆಪ್ಪದ ಮೇಲೆ ನಿಂತು ಪೋಸ್​ ಕೊಡುವ ಸಂದರ್ಭ ತೆಪ್ಪ ಮಗುಚಿದೆ. ಚಂದ್ರು, ಶಶಿಕಲಾ ನೀರಿನಲ್ಲಿ ಮುಳುಗಿದ್ದು, ಶವಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. : ------