ಚುನಾವಣೆಗೆ ನಿಗಧಿಯಾದರೆ ಪಾಲಿಕೆ ವ್ಯಾಪ್ತಿಗೆ ಗ್ರಾಮಗಳ ಸೇರ್ಪಡೆ ಸದ್ಯಕ್ಕಿಲ್ಲ : ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು,ನವೆಂಬರ್,09,2020(..): ಗ್ರಾ.ಪಂ ಚುನಾವಣೆಗೆ ದಿನಾಂಕ ನಿಗಧಿಯಾದರೆ ಪಾಲಿಕೆ ವ್ಯಾಪ್ತಿಗೆ ಗ್ರಾಮಗಳ ಸೇರ್ಪಡೆ ಸದ್ಯಕ್ಕೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.ಹಲವು ಗ್ರಾಮಗಳನ್ನ ಪಾಲಿಕೆ ವ್ಯಾಪ್ತಿಗೆ ಸೇರಿಸಲು ಚಿಂತನೆ ನಡೆಯುತ್ತಿದೆ. ಈಗಾಗಲೇ ಸಿಎಂ ಅವರನ್ನು ಮೈಸೂರು ಭಾಗದ ನಾಯಕರು ಭೇಟಿ ಮಾಡಿದ್ದಾರೆ. ಈಗ ಅದರ ಬಗ್ಗೆ ಚರ್ಚೆ ಶುರುವಾಗಿದೆ. ಇನ್ನೂ ಹಲವು ಹಂತಗಳಲ್ಲಿ ಅದರ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದರು. ಸದ್ಯದಲ್ಲೆ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದೆ. ಒಂದು ವೇಳೆ ಗ್ರಾ.ಪಂ ಚುನಾವಣೆ ಶುರುವಾದರೆ ಈ ವಿಚಾರ ನಿಲ್ಲುತ್ತದೆ. ಚುನಾವಣೆ ಮುಗಿದ ಬಳಿಕ ಎನಾಗುತ್ತದೆ ನೋಡೋಣ ಎಂದು ತಿಳಿಸಿದರು. : -------..