ಶಿಥಿಲಗೊಂಡ ಮೆಡಿಕಲ್ ಕಾಲೇಜು ಹಾಸ್ಟೇಲ್ ಕಟ್ಟಡ : ಸಚಿವ ಎಸ್.ಟಿ.ಸೋಮಶೇಖರ್ ಪರಿಶೀಲನೆ ಮೈಸೂರು,ನವೆಂಬರ್,09,2020(..): ಶಿಥಿಲಾವಸ್ಥೆ ಹಂತ ತಲುಪಿರುವ ಮೈಸೂರು ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್ ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.ಸೋಮವಾರ ಮೈಸೂರು ಮೆಡಿಕಲ್ ಕಾಲೇಜು ಹಾಸ್ಟೆಲ್ ಗೆ ಭೇಟಿ ನೀಡಿದ ಸಚಿವರು ಕಟ್ಟಡ ಅಧಿಕಾರಿಗಳೊಂದಿಗೆ ಕಟ್ಟಡ ಪರಿಶೀಲಿಸಿದರು. ಬಳಿಕ ಮಾತನಾಡಿ, ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡ ಮಳೆ ಬಂದರೆ ಸೋರುತ್ತಿದ್ದು, ಈ ಕಟ್ಟಡದಲ್ಲಿ 400ಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ 2018ರಲ್ಲಿ ಕಾಮಗಾರಿಗೆ 7 ಕೋಟಿ ಅಂದಾಜು ಮಾಡಲಾಗಿತ್ತು. ಈಗ ಮತ್ತೆ 5 ರಿಂದ 10 % ರಷ್ಟು ಹೆಚ್ಚಿನ ಹಣ ಬೇಕಾಗಬಹುದು. ವೈದ್ಯಕೀಯ ವಿದ್ಯಾರ್ಥಿಗಳು ಇಲ್ಲಿ ಉಳಿಯಲು ಸಾಧ್ಯವಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸುತ್ತೇವೆ. ಆರೋಗ್ಯ ಸಚಿವರ ಜೊತೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಎಂದರು. : ------..-