ಮಹದೇವ ಭೈರಗೊಂಡ ಮೇಲೆ ಗುಂಡಿನ ದಾಳಿ ಪ್ರಕರಣ: ಮತ್ತೆ ಐವರು ಆರೋಪಿಗಳ ಬಂಧನ… ವಿಜಯಪುರ,ನವೆಂಬರ್,7,2020(..):ಮಹದೇವ ಭೈರಗೊಂಡ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಮತ್ತೆ ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಸಿದ್ಧು ಬೊಮ್ಮನಜೋಗಿ(25), ರವಿಬಂಡಿ(20), ಸಂಜು(28), ಯಾಶೀನ ದಂಬರಗಿ(25), ಕರೆಪ್ಪ ಸೊನ್ನದ(25) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 2 ಕಂಟ್ರಿಮೇಡ್ ಪಿಸ್ತೂಲ್,1ಮಚ್ಚು ಮತ್ತ 4 ಸಜೀವ ಗುಂಡುಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ವಿಜಯಪುರ ಎಸ್.ಪಿ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಮಹಾದೇವ ಭೈರಗೊಂಡ ಚಲಿಸುತ್ತಿದ್ದ ಕಾರಿಗೆ ಟಿಪ್ಪರ್‌ನಿಂದ ಡಿಕ್ಕಿ ಹೊಡೆಸಿ, ಆರೋಪಿಗಳು ಗುಂಡಿನ ದಾಳಿ ನಡೆಸಿದ್ದರು. ಪ್ರಕರಣ ಸಂಬಂಧ ನಾಗಪ್ಪ ಪೀರಗೊಂಡ, ವಿಜಯ ತಾಳಿಕೋಟೆಯನ್ನ ಬಂಧಿಸಲಾಗಿತ್ತು. ಇದೀಗ ಮತ್ತೆ ಐವರು ಆರೋಪಿಗಳನ್ನ ಬಂಧಿಸಲಾಗಿದ್ದು ಇವರು ವಿಜಯಪುರ್ ಅತಾಲಟ್ಟಿ, ಅಲಿಯಾಬಾದ್,ಚಡಚಣ ನಿವಾಸಿಗಳು ಎನ್ನಲಾಗಿದೆ. : - - - - – .