ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಸ್ವಂತ ಭೂಮಿ ದಾನ ಮಾಡಿದ ಬಿಎಂಟಿಸಿ ಅಧ್ಯಕ್ಷ ಎನ್ ಎಸ್ ನಂದೀಶ್ ರೆಡ್ಡಿ… ಬೆಂಗಳೂರು,ನವೆಂಬರ್,6,2020(..):ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಮಾಜಿ ಶಾಸಕ ಹಾಗೂ ಬಿಎಂಟಿಸಿ ಅಧ್ಯಕ್ಷ ಎನ್ ಎಸ್ ನಂದೀಶ್ ರೆಡ್ಡಿ ಸ್ವಂತ ಭೂಮಿ ದಾನ ಮಾಡಿದ್ದಾರೆ. ಬೆಂಗಳೂರಿನ ದೊಡ್ಡ ನೆಕ್ಕುಂದಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ನಿರ್ಮಾಣಕ್ಕಾಗಿ 2.5ಕೋಟಿ ರುಪಾಯಿ ಮೌಲ್ಯದ ತಮ್ಮ ಸ್ವಂತ ಭೂಮಿಯನ್ನ ನಂದೀಶ್ ರೆಡ್ಡಿ ದಾನ ಮಾಡಿದ್ದಾರೆ. ಈ ಸಂಬಂಧ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಗೆ 40/60 ಭೂಮಿಯನ್ನ ನಂದೀಶ್ ರೆಡ್ಡಿ ಹಸ್ತಾಂತರ ಮಾಡಿದ್ದಾರೆ. ದೊಡ್ಡ ನೆಕ್ಕುಂದಿ ಪಶುಚಿಕಿತ್ಸಾಲಯ ಕಟ್ಟಡದ ಸ್ಥಳದಲ್ಲಿ ಬಹಳ ವರ್ಷಗಳ ಹಿಂದೆ ಬಸವಣ್ಣ ದೇವರ ದೇವಸ್ಥಾನವಿದ್ದು ತದನಂತರ ಆಸ್ಥಳದಲ್ಲಿ ಪಶು ಚಿಕಿತ್ಸಾಲಯ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಈಗಿರುವ ಸ್ಥಳದಲ್ಲಿ ಬಸವಣ್ಣ ದೇವರ ಮಂದಿರ ಪುನರ್ ನಿರ್ಮಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಹೀಗಾಗಿ ಹೊಸ ಪಶು ಚಿಕಿತ್ಸಾಲಯ ನಿರ್ಮಾಣಕ್ಕಾಗಿ ಬಿಎಂಟಿಸಿ ಅಧ್ಯಕ್ಷ ಎನ್ ಎಸ್ ನಂದೀಶ್ ರೆಡ್ಡಿ ಸ್ವಂತ ಸ್ಥಳವನ್ನ ದಾನ ಮಾಡಿದ್ದಾರೆ. : - - - - – – .