ರಸ್ತೆ ಪಕ್ಕದಲ್ಲೇ ಹುಲಿರಾಯ ಪ್ರತ್ಯಕ್ಷ: ಪುಳಕಿತರಾದ ಪ್ರಯಾಣಿಕರು… ಚಾಮರಾಜನಗರ,ನವೆಂಬರ್,6,2020(..):ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ರಸ್ತೆ ಪಕ್ಕದಲ್ಲಿ ಕುಳಿತಿದ್ದ ಹುಲಿಯನ್ನ ನೋಡಿ ಅಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಪುಳಕಿತರಾದರು. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ದಾರಿಯ ಕಟ್ಟೆ ಬಳಿ ಹುಲಿ ಕುಳಿತಿದ್ದು, ಹುಲಿ ಕುಳಿತ ದೃಶ್ಯವನ್ನ ಯಾರೋ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ರಸ್ತೆ ಬದಿಯಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿ ಹುಲಿರಾಯ ಕಂಡು ಬಂದಿದ್ದು ರಸ್ತೆ ಪಕ್ಕದಲ್ಲಿ ಕುಳಿತಿದ್ದ ಹುಲಿರಾಯನ ನೋಡಿ ಪ್ರಯಾಣಿಕರು ಕಣ್ತುಂಬಿಕೊಂಡರು. : -- -