ಡಿ.ಕೆ ರವಿ ಅವರ ತಂದೆ ತಾಯಿ ವಿಡಿಯೋ ಬಿಡುಗಡೆ ಮಾಡಿ ಡಿ.ಕೆಶಿ ಅವರಿಂದ ಗಿಮಿಕ್- ಸಚಿವ ಆರ್.ಅಶೋಕ್… ಬೆಂಗಳೂರು,ನವೆಂಬರ್,4,2020(..):ಆರ್.ಆರ್ ನಗರ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಮತ ನೀಡುವಂತೆ ದಿ. ಡಿ.ಕೆ ರವಿ ಅವರ ತಾಯಿ ಗೌರಮ್ಮ ಮನವಿ ಮಾಡಿದ್ದ ವಿಡಿಯೋ ಕುರಿತು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ. ದಿ. ಡಿ.ಕೆ ರವಿ ಅವರ ತಂದೆ ತಾಯಿ ವಿಡಿಯೋ ಬಿಡುಗಡೆ ಮಾಡಿ ಡಿ.ಕೆ ಶಿವಕುಮಾರ್ ಗಿಮಿಕ್ ಮಾಡಿದ್ದಾರೆ. ಆದರೆ ಅವರ ಗಿಮಿಕ್ ಇಲ್ಲಿ ನಡೆಯಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಟಾಂಗ್ ನೀಡಿದ್ದಾರೆ. ಆರ್.ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ಶಿರಾ ಕ್ಷೇತ್ರದಲ್ಲಿ ಕಮಲ ಅರಳುತ್ತದೆ. ಕಾಂಗ್ರೆಸ್ ಗೆ ಮತ ಹಾಕುವವರು ಯಾರೂ ಇಲ್ಲ. ಹೀಗಾಗಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. : - –-- - – - -. .