ಕಾಲು ಜಾರಿ ಕೆರೆಗೆ ಬಿದ್ದು ರೈತ ಸಾವು ಮೈಸೂರು,ನವೆಂಬರ್,04,2020(..): ಹಸು ತೊಳೆಯುವಾಗ ಕಾಲು ಜಾರಿ ಕೆರೆಗೆ ಬಿದ್ದು ರೈತ ಮೃತಪಟ್ಟಿದ್ದಾನೆ. ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತುಂಬುನೇರಳೆ ಗ್ರಾಮದ ಸೀರನಕಟ್ಟೆ ಕೆರೆಯಲ್ಲಿ ಈ ಘಟನೆ ಜರುಗಿದೆ. ರೈತ ನಾಗರಾಜು (38) ಮೃತ ದುರ್ದೈವಿ. ಕೆರೆಯಲ್ಲಿ ಮೃತದೇಹಕ್ಕಾಗಿ ಅಗ್ನಿಶಾಮಕ ದಳದಿಂದ ಶೋಧ ನಡೆಸಲಾಗುತ್ತಿದ್ದು, ಸ್ಥಳಕ್ಕೆ ಬಿಳಿಗೆರೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. : ----