ಯಶ್’ಗೆ ಆ್ಯಕ್ಸನ್ ಕಟ್ ಹೇಳಲಿದ್ದಾರೆ ಸ್ಟಾರ್ ಡೈರೆಕ್ಟರ್ ಶಂಕರ್ ! ಬೆಂಗಳೂರು, 04, ನವೆಂಬರ್ 2020:ಯಶ್ ಜೊತೆ ಸಿನಿಮಾ ಮಾಡಲಿದ್ದಾರೆ ಖ್ಯಾತ ನಿರ್ದೇಶಕ ಶಂಕರ್ ?ಇಂತಹದೊಂದು ಪ್ರಶ್ನೆ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ. ಹೌದು. ಕಾಲಿವುಡ್‌ನ ಸ್ಟಾರ್‌ ನಿರ್ದೇಶಕ ಶಂಕರ್‌ ಕೂಡ ಯಶ್‌ ಜೊತೆ ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ!ಹೊಸ ಚಿತ್ರಕ್ಕೆ ಶಂಕರ್‌ ಸ್ಕ್ರಿಪ್ಟ್‌ ಅಂತಿಮಗೊಳಿಸಿದ್ದಾರೆ. ಇದು ಮಲ್ಟಿಸ್ಟಾರರ್‌ ಸಿನಿಮಾ ಆಗಿರಲಿದ್ದು ದಕ್ಷಿಣ ಭಾರತದ ಎಲ್ಲ ಭಾಷೆಗಳ ಸೂಪರ್‌ ಸ್ಟಾರ್‌ ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ‘ರಾಕಿಂಗ್‌ ಸ್ಟಾರ್‌’ ಯಶ್‌ ನಟಿಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಕೆಜಿಎಫ್‌: ಚಾಪ್ಟರ್‌ 2′ ಬಳಿಕ ಅವರು ಶಂಕರ್‌ ಜೊತೆ ಕೈ ಜೋಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾಲಿವುಡ್‌ ನಟ ವಿಜಯ್‌ ಸೇತುಪತಿ ಕೂಡ ಇದರಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ.