ಪ್ರೇಮಿಗಳ ದಿನವೇ ಸಪ್ತಪದಿ ತುಳಿಯಲಿದ್ದಾರೆ ‘ಲವ್ ಬರ್ಡ್ಸ್’ ಮಿಲನ-ಕೃಷ್ಣ ಬೆಂಗಳೂರು, 11, ನವೆಂಬರ್ 2020:ಡಾರ್ಲಿಂಗ್’ ಕೃಷ್ಣ-ಮಿಲನಾ ನಾಗರಾಜ್‌ 2021ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಈ ಪ್ರೇಮಿಗಳು ಸಪ್ತಪದಿ ತುಳಿಯಲಿದ್ದಾರೆ. ಈ ವಿಚಾರವನ್ನು ಬಹಿರಂಗಪಡಿಸುವುದಕ್ಕಾಗಿಯೇ ಒಂದು ಕಲರ್‌ಫುಲ್ ಫೋಟೋಶೂಟ್ ಮಾಡಿಸಿಕೊಂಡಿದೆ ಈ ಲವ್ ಮಾಕ್ಟೇಲ್ ಜೋಡಿ !ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಜೊತೆಗೆ ಕೃಷ್ಣ-ಮಿಲನಾ ಜೋಡಿಗೆ ಸಿನಿಪ್ರಿಯರು, ಚಿತ್ರರಂಗದ ಗಣ್ಯರು, ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಅಂದಹಾಗೆ ‘ಲವ್ ಮಾಕ್‌ಟೇಲ್ 2’ ಇದೀಗ ಅದರ ಪಾರ್ಟ್ 2 ಕೆಲಸಗಳು ಸಾಗುತ್ತಿವೆ. ಬಹುಶಃ ಅವರ ಮದುವೆಗೂ ಮೊದಲೇ ‘ಲವ್ ಮಾಕ್‌ಟೇಲ್ 2’ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.