ಮೈಸೂರಿನ ನೂತನ ಟ್ರಾಮ ಸೆಂಟರ್ ಸಚಿವ ಎಸ್.ಟಿ ಸೋಮಶೇಖರ್ ಭೇಟಿ ಪರಿಶೀಲನೆ… ಮೈಸೂರು,ನವೆಂಬರ್4,2020(..):ನಗರದ ಕೆ.ಆರ್.ಎಸ್ ಮುಖ್ಯರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‌ಟ್ರಾಮ ಸೆಂಟರ್ ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರು. ಕೆ ಆರ್ ಆಸ್ಪತ್ರೆಯ ಒತ್ತಡ ತಗ್ಗಿಸುವ ಹಿನ್ನಲೆ ಟ್ರಾಮ ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿದ್ದು, ಅತ್ತ ಕೋವಿಡ್ ಹೆಚ್ಚಾದ ಹಿನ್ನಲೆ, ಕೊವೀಡ್ ಕೇರ್ ಸೆಂಟರ್ ಆಗಿ ಟ್ರಾಮ ಸೆಂಟರ್ ಅನ್ನ ಬಳಕೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಟ್ರಾಮ ಸೆಂಟರ್ 45 ವೆಂಟಿಲೇಟರ್ ಮತ್ತು 250 ಆಕ್ಸಿಜನ್ ಬೆಡ್ ಗಳನ್ನ ಒಳಗೊಂಡಿದ್ದು, ಉದ್ಘಾಟನೆಗೆ ಸಿದ್ದವಾಗಿದೆ. ಹೀಗಾಗಿ ಇಂದು ಸಚಿವ ಎಸ್.ಟಿ ಸೋಮಶೇಖರ್ ಟ್ರಾಮ ಸೆಂಟರ್ ಗೆ ಭೇಟಿ ನೀಡಿ ಪರಿಶೀಲಿಸಿದರು. ಭೇಟಿ ವೇಳೆ ಸಚಿವ ಎಸ್ ಟಿ ಸೋಮಶೇಖರ್ ಗೆ ಶಾಸಕ‌ ನಾಗೇಂದ್ರ, ಮುಡಾ ಅಧ್ಯಕ್ಷ ರಾಜೀವ್ ಸಾಥ್ ನೀಡಿದರು. : - - - -