ವಿರಾಜಪೇಟೆ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ… ಕೊಡಗು,ನವೆಂಬರ್,3,2020(..): ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು, ಬಿಜೆಪಿಯ ಟಿ.ಆರ್. ಸುಶ್ಮಿತಾ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಟಿ.ಆರ್. ಸುಶ್ಮಿತಾ 10 ಮತಗಳನ್ನ ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಹರ್ಷವರ್ಧನ್ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನದಲ್ಲಿ ಕಾಂಗ್ರೆಸ್ ನ ಅಗಸ್ಟಿನ್ ಮತ್ತು ಹರ್ಷವರ್ಧನ್ ಅವರಿಗೆ 10-10 ಸಮಬಲದ ಮತಗಳು ಬಂದವು. ನಂತರ ಲಾಟರಿ ಮೂಲಕ ಆಯ್ಕೆಯಲ್ಲಿ ಹರ್ಷವರ್ಧನ್ ಗೆ ಅದೃಷ್ಟ ಒಲಿದಿದ್ದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ 8 ಸದಸ್ಯರು, ಸಂಸದರು, ಶಾಸಕರ ಮತಗಳು ಸೇರಿ 10 ಮತಗಳು ಬಿಜೆಪಿಗೆ ಲಭಿಸಿದೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಮೈತ್ರಿ ಕೂಟಕ್ಕೆ ಸೋಲಾಯಿತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮೂಲಕ ಕಮಲ ಪಕ್ಷದ ದಿಗ್ವಿಜಯ ಸಾಧಿಸಿತು. : –- - - -