ಆರ್. ಆರ್ ನಗರ ಮತ್ತು ಶಿರಾ ಉಪ ಚುನಾವಣೆ: 9 ಗಂಟೆವರೆಗೆ ಆದ ಮತದಾನದ ಪ್ರಮಾಣವೆಷ್ಟು ಗೊತ್ತೆ..? .. ಬೆಂಗಳೂರು,ನವೆಂಬರ್,3,2020(..):ಇಂದು ರಾಜ್ಯದ ಎರಡು ಕ್ಷೇತ್ರಗಳಾದ ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು ಈಗಾಗಲೇ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಕೊರೋನಾ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಚುನಾವಣಾ ಆಯೋಗ ಚುನಾವಣೆ ನಡೆಸುತ್ತಿದ್ದು ಈ ಮಧ್ಯೆ 9 ಗಂಟೆ ವೇಳೆಗೆ ಆರ್ ಆರ್ ನಗರದಲ್ಲಿ ಶೇ.7.1 ರಷ್ಟು ಮತದಾನವಾಗಿದೆ. ಶಿರಾದಲ್ಲಿ ಶೇ.8.25 ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿ ಇದ್ದು, ಆರ್.ಆರ್ ನಗರದಲ್ಲಿ ‘ಕೈ’ ಅಭ್ಯರ್ಥಿ ಕುಸುಮಾ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ನಡುವೆ ಫೈಟ್ ಏರ್ಪಟ್ಟಿದೆ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಟಿ.ಬಿ ಜಯಚಂದ್ರ ಹಾಗೂ ಬಿಜೆಪಿಯ ಡಾ.ರಾಜೇಶ್ ಗೌಡ ನಡುವೆ ನೇರಹಣಾಹಣಿ ಇದ್ದು, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸಹ ಫೈಟ್ ನೀಡಲಿದ್ದಾರೆ. ಈ ಎರಡು ಕ್ಷೇತ್ರದ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ. : . – ---