ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿವಿ ಪಟ್ಟಿ ಬಿಡುಗಡೆ : ಮೈಸೂರಿನ ಪ್ರೊ.ಕೆ.ಎಸ್.ರಂಗಪ್ಪ ಈಗ ‘ ’ . ಮೈಸೂರು, ನ.02 , 2020 : (.. ) : ಖ್ಯಾತ ರಸಾಯನ ಶಾಸ್ತ್ರಜ್ಞ, ವಿಶ್ರಾಂತ ಕುಲಪತಿ ಪ್ರೊ. ರಂಗಪ್ಪ ಕಂಚಗಾರನಕೊಪ್ಪಲು . ಎಸ್ ( ಪ್ರೊ.ಕೆ.ಎಸ್.ರಂಗಪ್ಪ ) ಇದೀಗ ‘ ವಿಶ್ವದ ಅತ್ಯುನ್ನತ ವಿಜ್ಞಾನಿ ‘ ( ) ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ( ) ಬಿಡುಗಡೆ ಮಾಡಿರುವ ವಿಶ್ವದ ಟಾಪ್ ಮೋಸ್ಟ್ ವಿಜ್ಞಾನಿಗಳ ಪೈಕಿ ಪ್ರೊ.ಕೆ.ಎಸ್.ರಂಗಪ್ಪ ಅವರು ಸ್ಥಾನ ಪಡೆದಿರುವುದು ವಿಶೇಷ. ಈ ಸಂಬಂಧ 25 ಪುಟಗಳ ಪಟ್ಟಿಯನ್ನು ಅಮೇರಿಕಾದ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿದೆ. (./qHIJ4) ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪೈಕಿ ಭಾರತದ ಶೇ. 2 ರಷ್ಟು ಸೈಂಟಿಸ್ಟ್ ಗಳನ್ನು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಪಟ್ಟಿ ಮಾಡಿದೆ. ಈ ಪೈಕಿ ಸಾವಯವ ರಸಾಯನಶಾಸ್ತ್ರ ( ) ವಿಭಾಗದಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅವರ ಸಾಧನೆಯನ್ನು ಗುರುತಿಸಿ ಸ್ಥಾನ ನೀಡಿರುವುದು ವಿಶೇಷ. ವರ್ಲ್ಡ್ ವೈಡ್ ರ್ಯಾಂಕಿಂಗ್ ನಲ್ಲಿ ( ) ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಕೆ.ಎಸ್.ರಂಗಪ್ಪ ಅವರ ಸಾಧನೆಯನ್ನು ಈ ರ್ಯಾಂಕಿಂಗ್ ( ) ನೀಡುವ ವೇಳೆ ಅಮೇರಿಕಾದ ಸ್ಟ್ತಾನ್ ಫೋರ್ಡ್ ವಿವಿ ಗಣನೆಗೆ ತೆಗೆದುಕೊಂಡಿದೆ. ವರ್ಲ್ಡ್ ವೈಡ್ ರ್ಯಾಂಕಿಂಗ್ ನಲ್ಲಿ ( ) ಪ್ರೊ.ಕೆ.ಎಸ್.ರಂಗಪ್ಪ ಅವರು 2181 ನೇ ಸ್ಥಾನದಲ್ಲಿದ್ದು, ಅವರ 438 ಸಂಶೋಧನಾ ಪ್ರಬಂಧಗಳನ್ನು ರ್ಯಾಂಕಿಂಗ್ ಆಯ್ಕೆ ವೇಳೆ ಪರಿಗಣಿಸಲಾಗಿದೆ. ದೇಶದಲ್ಲಿ ಅಂದಾಜು 750 ವಿಶ್ವವಿದ್ಯಾನಿಲಯಗಳಿದ್ದು, ( ಸರಕಾರಿ ಸ್ವಾಮ್ಯದ ) ಈ ಪೈಕಿ ಬಹುಶಃ, ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಕೆ.ಎಸ್.ರಂಗಪ್ಪ ಅವರೊಬ್ಬರೇ ಸ್ಥಾನ ಪಡೆದಿರುವುದು ವಿಶೇಷ. ಹಲವು ಮೈಲುಗಲ್ಲು : ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಸಾಧನೆಗಳ ಮೂಲಕ ಮೈಲುಗಲ್ಲು ಸ್ಥಾಪಿಸಿದ್ದಾರೆ. 500 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಪ್ರೊ.ಕೆ.ಎಸ್.ರಂಗಪ್ಪ, 11 ವಿವಿಧ ಸಂಶೋಧನಾ ಪೇಟಂಟ್ಸ್ ಗಳನ್ನು ಸಂಪಾಧಿಸಿದ್ದಾರೆ. ಮಾಲಿಕ್ಯೂಲರ್ ಕೆಮಿಸ್ಟ್ರಿಯಲ್ಲಿನ ಇವರ ಹಲವಾರು ಸಂಶೋಧನೆಗಳು ಈಗ ಚೀನಾ, ಸಿಂಗಾಪುರದಲ್ಲಿ ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ. ವಿವಿಧ ದೇಶಗಳ 350 ರಿಂದ 400 ಮಂದಿ ಸಂಶೋಧಕರು ಪ್ರೊ.ರಂಗಪ್ಪ ಅವರ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸುತ್ತಿರುವುದು ಮತ್ತೊಂದು ವಿಶೇಷ. ನನ್ನ ಪಾಲಿನ ಅತ್ಯುನ್ನತ ಪ್ರಶಸ್ತಿ : ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ವರ್ಲ್ಡ್ ಟಾಪ್ ಮೋಸ್ಟ್ ಸೈಂಟಿಸ್ಟ್ ಗಳ ಪೈಕಿ ಭಾರತದ ಶೇ. 2 ರಷ್ಟು ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಆರ್ಗಾನಿಕ್ ಕೆಮಿಸ್ಟ್ರಿ ವಿಭಾಗದಲ್ಲಿ ಸ್ಥಾನ ಪಡೆದಿರುವ ಬಗ್ಗೆ ಪ್ರೊ.ಕೆ.ಎಸ್.ರಂಗಪ್ಪ ಅವರು ‘ ಜಸ್ಟ್ ಕನ್ನಡ ‘ ಜತೆ ಮಾತನಾಡಿ ಹೇಳಿದಿಷ್ಟು… ಇದು ತುಂಬಾ ಸಂತಸದ ಸಂಗತಿ. ನನ್ನ ಪಾಲಿಗೆ ವಿಶ್ವದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ಲಭಿಸಿದಷ್ಟೆ ಖುಷಿಯಾಗಿದೆ. ಕಳೆದ 40 ವರ್ಷಗಳಿಂದ ನಾನು ನಡೆಸಿದ ಸಂಶೋಧನೆಗಳಿಗೆ ಲಭಿಸಿದ ನಿಜವಾದ ಮಾನ್ಯತೆ ಎಂದರು. : ...---- --- .