ಪ್ರವಾಸಿತಾಣ, ಜಿಲ್ಲಾ ಗಡಿಗಳ ಬಂದ್ ಮಾಡಲು ಸಾಧ್ಯವಿಲ್ಲ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೈಸೂರು,ನವೆಂಬರ್,01,2020(..): ಪ್ರವಾಸಿತಾಣಗಳನ್ನ ಬಂದ್ ಮಾಡುವುದಾಗಲಿ.? ಜಿಲ್ಲಾ ಗಡಿಗಳನ್ನ ಬಂದ್ ಮಾಡುವುದಾಗಲಿ ಸಾಧ್ಯವಿಲ್ಲ. ಅದಕ್ಕಾಗಿ ಅರಮನೆಯಲ್ಲಿ ಕೊರೊನಾ ಟೆಸ್ಟ್ ಮಾಡುತ್ತಿದ್ದೇವೆ. ಇದಕ್ಕೆ ಜನರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಕೊರೊನಾ ಕಂಟ್ರೋಲ್ ಬಂದಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಕೆಲವರಿಗೆ ಇದು ಸಮಸ್ಯೆ ಅನ್ನಿಸಬಹುದು ಆದರೆ ಅನಿವಾರ್ಯ. ಸದ್ಯಕ್ಕೆ ಆಕ್ಸಿಜನ್ ಹಾಗೂ ಬೆಡ್ ವ್ಯವಸ್ಥೆ ಇದೆ. ಜನರು ಸಹಕಾರ ನೀಡಿದರೆ ಕೊರೊನಾ ನಿಯಂತ್ರಣ ಮಾಡಬಹುದು ಎಂದರು. ಮೈಸೂರಿನಲ್ಲಿ ನಾವು ಕೊರೊನಾವನ್ನ ನಿಯಂತ್ರಣ ತರುತ್ತಿದ್ದೇವೆ. ತ್ವರಿತ ಚಿಕಿತ್ಸೆ ಸಿಗದ ಕಾರಣ ಕೊರೊನಾ ಸಾವಿನ ಪ್ರಮಾಣ ಹೆಚ್ಚಾಗಿತ್ತು. ಈ ಬಗ್ಗೆ ನಾವು ಹೆಚ್ಚಿನ ಗಮನ ಹರಿಸಿದ್ದೇವೆ ಎಂದು ಹೇಳಿದರು. ತಾಲ್ಲೂಕು ಕೇಂದ್ರದಲ್ಲಿ ಹೆಚ್ಚಿನ ವ್ಯವಸ್ಥೆ ಕಲ್ಪಿಸಿದೇವು. ಹೆಚ್ಚು ಹೆಚ್ಚು ಟೆಸ್ಟ್ ಹಾಗೂ ಆಕ್ಸಿಜನ್ ಮತ್ತು ಬೆಡ್ ವ್ಯವಸ್ಥೆ ಮಾಡಿದ್ದೇವೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಹಾಕಿಕೊಳ್ಳಬೇಕು. ಆಗಷ್ಟೇ ನಾವು ಕೊರೊನಾವನ್ನ ನಿಯಂತ್ರಣ ಮಾಡಲು ಸಾಧ್ಯ ಎಂದು ತಿಳಿಸಿದರು. : ------