ಕರೆದ ತಕ್ಷಣ ಬರುವುದಕ್ಕೆ ನಟ ದರ್ಶನ್ ಕರು ಅಲ್ಲ : ಸಚಿವ ಆರ್.ಅಶೋಕ್ ಟೀಕೆ ಬೆಂಗಳೂರು,ನವೆಂಬರ್, 01, 2020(..): ಕರೆದ ತಕ್ಷಣ ಬರುವುದಕ್ಕೆ ನಟ ದರ್ಶನ್ ಕರು ಅಲ್ಲ . ಸಂಜೆ 6ಗಂಟೆಯವರೆಗೆ ಸಮಯ ಕೊಡುತ್ತೇನೆ ತಾಕತ್ತಿದ್ದರೆ ಪ್ರಚಾರಕ್ಕೆ ಕರೆಸಿ ಎಂದು ಕಂದಾಯ ಸಚಿವ ಆರ್.ಅಶೋಕ್ ಸವಾಲು ಹಾಕಿದ್ದಾರೆ. ವಿಪಕ್ಷನಾಯಕ ಡಿ.ಕೆ.ಶಿವಕುಮಾರ್ ಮುನಿರತ್ನ ಪರ ನಟ ದರ್ಶನ್ ಪ್ರಚಾರಕ್ಕೆ ಸಂಬಂಧಿಸಿದಂತೆ ನಾನು ಕರೆದರೂ ದರ್ಶನ್ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದ್ದರು. ಇದಕ್ಕೆ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಕರೆದ ತಕ್ಷಣ ಬರುವುದಕ್ಕೆ ದರ್ಶನ್ ಕರು ಅಲ್ಲ. ಇಂದು ಸಂಜೆ 6ಗಂಟೆಯವರೆಗೆ ಸಮಯ ಕೊಡುತ್ತೇನೆ ತಾಕತ್ತಿದ್ದರೆ ಪ್ರಚಾರಕ್ಕೆ ಕರೆಯಿಸಿ ಎಂದು ಸವಾಲು ಹಾಕಿದ್ದಾರೆ. : ------ .