50 ರಿಂದ 60 ಸಾವಿರ ಮತಗಳ ಅಂತರದಿಂದ ಮುನಿರತ್ನರನ್ನ ಗೆಲ್ಲಿಸಿ- ಆರ್.ಆರ್ ನಗರದಲ್ಲಿ ಸಿಎಂ ಬಿಎಸ್ ವೈ ಪ್ರಚಾರ… ಬೆಂಗಳೂರು,ಅಕ್ಟೋಬರ್,31,2020(..): 50 ರಿಂದ 60 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮುನಿರತ್ನರನ್ನ ಗೆಲ್ಲಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಆರ್.ಆರ್ ನಗರ ಜನತೆಯಲ್ಲಿ ಮನವಿ ಮಾಡಿದರು. ಆರ್.ಆರ್ ನಗರ ಉಪಚುನಾವಣಾ ಕಣ ರಂಗೇರಿದ್ದು ನಿನ್ನೆಯಷ್ಟೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ನಡೆಸಿದ್ದರು. ಇದೀಗ ಇಂದು ಆರ್.ಆರ್ ನಗರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಮುನಿರತ್ನ ಪರ ಜ್ಞಾನಭಾರತಿ ವಾರ್ಡ್ ನಿಂದ ಸಿಎಂ ಬಿಎಸ್ ಯಡಿಯೂರಪ್ಪ ಪ್ರಚಾರ ಆರಂಭಿಸಿದ್ದು, ಮುನಿರತ್ನ ಪರ ಮತಯಾಚಿಸಿದರು. ಈ ವೇಳೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಕ್ಷೇತ್ರದಲ್ಲಿ ಶೇ.70ಕ್ಕಿಂತ ಕಡಿಮೆ ಮತದಾನವಾಗಬಾರದು. ಮುನಿರತ್ನರನ್ನ 50 ರಿಂದ 60 ಸಾವಿರ ಮತಗಳ ಅಂತರದಿಂದ ಮುನಿರತ್ನರನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು. : 50 60 - - - -