ಕಾಂಗ್ರೆಸ್ ನಾಯಕರದ್ಧು ಊಸರವಳ್ಳಿ ಪ್ರವೃತ್ತಿ- ಸಚಿವ ಬಿ.ಸಿ ಪಾಟೀಲ್ ಕಿಡಿ… ಬೆಂಗಳೂರು,ಅಕ್ಟೋಬರ್,31,2020(..):ನವೆಂಬರ್ 3ರಂದು ಆರ್.ಆರ್ ನಗರ ಉಪಚುನಾವಣಾ ಹಿನ್ನೆಲೆ, ಆಡಳಿತ ಮತ್ತು ವಿಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದು ಈ ನಡುವೆ ಕಾಂಗ್ರೆಸ್ ವಿರುದ್ಧ ಕೃಷಿ ಸಚಿವ ಬಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಅಭ್ಯರ್ಥಿ ಮುನಿರತ್ನ ಪರ ಕಾಂಗ್ರೆಸ್ ನಾಯಕರು ಸುಮ್ಮನೇ ಆರೋಪ, ಟೀಕೆ ಮಾಡುತ್ತಿದ್ದಾರೆ. ಮುನಿರತ್ನ ವಿರುದ್ಧ ಟೀಕೆ ಮಾಡೋದು ಸರಿಯಲ್ಲ. ಕಾಂಗ್ರೆಸ್ ನವರದ್ಧು ಊಸರವಳ್ಳಿ ಪ್ರವೃತ್ತಿ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದರು. ಮಾಧ್ಯಮದ ಜತೆ ಇಂದು ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ಜಾತಿ ಹೆಸರಿನಲ್ಲಿ ಕಾಂಗ್ರೆಸ್ ಮತಯಾಚನೆಗೆ ಮುಂದಾಗಿದೆ. ಆದರೆ ಜಾತಿ ಹೆಸರಿನಲ್ಲಿ ಮತಯಾಚನೆ ಪ್ರಯೋಜನಕ್ಕೆ ಬರಲ್ಲ. ಆರ್.ಆರ್ ನಗರದಲ್ಲಿ ಮುನಿರತ್ನ ಪರ ಅಲೆ ಇದೆ ಎಂದು ಹೇಳಿದರು. : - -- - - -