ಲಿಫ್ಟ್ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು… ಬೆಂಗಳೂರು,ಅಕ್ಟೋಬರ್,30,2020(..):ಆಟವಾಡುತ್ತಿದ್ದ ವೇಳೆ ಲಿಫ್ಟ್ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಕೆಂಗೇರಿಯ ಕೋಡಿಪಾಳ್ಯದಲ್ಲಿ ಈ ಘಟನೆ ನಡೆದಿದೆ. ಉತ್ತರ ಕರ್ನಾಟಕ ಮೂಲದ ದಂಪತಿಯ ಪುತ್ರ ವಿನೋದ್(2) ಮೃತಪಟ್ಟ ಮಗು. ರಮೇಶ್ ಎಂಬುವವರ ಮಾಲೀಕತ್ವದ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗೆ ಬಿದ್ದು ಮಗು ಸಾವನ್ನಪ್ಪಿದೆ. ಆಟವಾಡುತ್ತಿದ್ದ ವೇಳೆ ವಿನೋದ್ ಲಿಫ್ಟ್​ನ ಗುಂಡಿಗೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡ ವಿನೋದ್​ ನನ್ನ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ‌ ಮಗು ಸಾವನ್ನಪ್ಪಿದೆ. ಈ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : --- - – –