ಇನ್ನು ಆರು ತಿಂಗಳಲ್ಲಿ ಮದಲೂರು ಕೆರೆ ತುಂಬಿಸಿ ನಾನೇ ಉದ್ಘಾಟಿಸುತ್ತೇನೆ- ಸಿಎಂ ಬಿಎಸ್ ವೈ ಭರವಸೆ… ತುಮಕೂರು,ಅಕ್ಟೋಬರ್,30,2020(..):ಮದಲೂರು ಕೆರೆ ತುಂಬಿಸಬೇಕು ಎನ್ನುತ್ತಿದ್ದೀರಿ. ಇನ್ನು ಆರು ತಿಂಗಳಲ್ಲಿ ಮದಲೂರು ಕೆರೆ ತುಂಬಿಸಿ ನಾನೇ ಉದ್ಘಾಟಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದರು. ಶಿರಾ ಉಪಚುನಾವಣೆ ಹಿನ್ನೆಲೆ ಮದಲೂರಿನಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಕೆ.ಅರ್. ಪೇಟೆ ಕ್ಷೇತ್ರದಲ್ಲಿ ಗೆಲ್ಲಲ್ಲು ನೀಡಿದ್ದ ಭರವಸೆ ಈಡೇರಿಸಲಾಗಿದೆ. ಅದರಂತೆ ಶಿರಾದಲ್ಲೂ ಈಡೇರಿಸಲಾಗುವುದು. 20-30 ಸಾವಿರ ಅಂತರದಿಂದ ರಾಜೇಶ್ ಗೌಡರನ್ನು ಗೆಲ್ಲಿಸಬೇಕು. ಶಿರಾದಲ್ಲಿ ರಾಜೇಶ್ ಗೌಡರನ್ನ ಗೆಲ್ಲಿಸುವ ಪಣ ತೊಡಲಾಗಿದೆ. ಯಾವ ಶಕ್ತಿಯೂ ಈ ಗೆಲುವನ್ನ ತಡೆಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ಬಿ.ಸದಾನಂದಗೌಡ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಎಂ. ರೇಣುಕಾಚಾರ್ಯ, ಅಭ್ಯರ್ಥಿ ಡಾ.ರಾಜೇಶ್ ಗೌಡ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. : – - – – - -